ವಿದ್ಯುತ್ ಕಂಬಕ್ಕೆ ದನದ ಬುರುಡೆ ಕಟ್ಟಿದ ಕಿಡಿಗೇಡಿಗಳು!
![belagavi](https://www.mahanayaka.in/wp-content/uploads/2022/06/belagavi.jpg)
ಬೆಳಗಾವಿ: ವಿದ್ಯುತ್ ದೀಪಗಳನ್ನು ಕಳ್ಳತನ ಮಾಡಿ ವಿದ್ಯುತ್ ಕಂಬವೊಂದಕ್ಕೆ ದನದ ಬುರುಡೆ ಕಟ್ಟಿ ಕಿಡಿಗೇಡಿತನ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ನಡೆದಿದೆ.
ಗೋಕಾಕ್ ನಗರ ಮತ್ತು ಗೋಕಾಕ್ ಫಾಲ್ಸ್ ರಸ್ತೆ ಮಧ್ಯೆ ಸೋಲಾರ್ ದೀಪ ಅಳವಡಿಸಲಾಗಿತ್ತು. ಕಳ್ಳರು ಸೋಲಾರ್ ದೀಪವನ್ನು ಕಳ್ಳತನ ಮಾಡಿದ ಬಳಿಕ ಲೈಟ್ ಕಂಬಕ್ಕೆ ಜಾನುವಾರುಗಳ ಬುರುಡೆ ಕಟ್ಟಿದ್ದಾರೆ.
ಕಳ್ಳರು ಎರಡು, ಮೂರು ಕಂಬಗಳಿಗೆ ಜಾನುವಾರುಗಳ ಬುರುಡೆಗಳನ್ನು ಕಟ್ಟಿರುವ ಕಿಡಿಗೇಡಿಗಳ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ನಗರ ಸಭೆ ಅಧಿಕಾರಿಗಳ ಗಮನಕ್ಕಿದ್ದರೂ ಬುರುಡೆಗಳನ್ನು ತೆರವು ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಘಟನೆ ಸಂಬಂಧ ಗೋಕಾಕ್ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD\
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಬಸ್ ಗಾಗಿ ಕಾಯುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ
ಕ್ಯಾಥೋಲಿಕ್ ಚರ್ಚ್ ಮೇಲೆ ಬಂದೂಕುಧಾರಿಗಳಿಂದ ದಾಳಿ: 50 ಮಂದಿಯ ಭೀಕರ ಹತ್ಯೆ
ಕೊರಿಯನ್ ವಿಡಿಯೋ ನೋಡುವ ಚಟದಿಂದ ಹೊರಬರಲಾಗದೇ ಆತ್ಮಹತ್ಯೆಗೆ ಶರಣಾದ ಬಾಲಕಿ!
ಪಠ್ಯಪರಿಷ್ಕರಣೆ ಸಮಿತಿಯಿಂದ ಮತ್ತೊಂದು ಯಡವಟ್ಟು: ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ