ಶಿಕ್ಷಣ ಒಂದು ಧರ್ಮದ ತಳಹದಿಯಲ್ಲಿ ಇರಬಾರದು ಎಂದು ಅಂಬೇಡ್ಕರ್ ಹೇಳಿದ್ದರು: ರುಕ್ಮಯ ಎಂ. ಕಕ್ಕೆಪದವು
ಬಂಟ್ವಾಳ: ಶಿಕ್ಷಣ ಒಂದು ಧರ್ಮದ ತಳಹದಿಯಲ್ಲಿ ಇರಬಾರದು. ಶಿಕ್ಷಣ ಒಂದು ವರ್ಗದ ತಳಹದಿಯಲ್ಲಿದ್ದರೆ, ಅದು ಒಂದು ವರ್ಗದ ಪಾಲಾಗುತ್ತದೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಉಪನ್ಯಾಸಕ ರುಕ್ಮಯ ಎಂ. ಕಕ್ಕೆಪದವು ಹೇಳಿದರು.
ಸಮಾಜ ಪರಿವರ್ತನಾ ವೇದಿಕೆ, ವಗ್ಗ ವಲಯದ ಆಶ್ರಯದಲ್ಲಿ ಬುದ್ಧ ಬಸವ ಅಂಬೇಡ್ಕರ್ ಚಿಂತನೆಯಡಿಯಲ್ಲಿ ಬಹುಜನ ಸಾಹಿತಿ ಸತೀಶ್ ಕಕ್ಕೆಪದವು ರವರ ನಿರ್ದೇಶನದಲ್ಲಿ, ಯುವ ನಾಯಕ ಅರುಣ್ ಮದ್ವರವರ ಸಾರಥ್ಯದಲ್ಲಿ, ಸಮಾಜ ಪರಿವರ್ತನಾ ಚಳುವಳಿಯ ಮುಖಂಡರಾದ ಪಿ.ಚೆನ್ನಪ್ಪರವರ ಅಧ್ಯಕ್ಷತೆಯಲ್ಲಿ ನಡೆದ ವಿಶ್ವ ಜ್ಞಾನಿ ಪರಮಪೂಜ್ಯ ಡಾ.ಬಾಬಾ ಸಾಹೇಬ್ ಭೀಮ್ ರಾವ್ ಅಂಬೇಡ್ಕರ್ ರವರ 131 ನೇ ಹುಟ್ಟುಹಬ್ಬ ಸಂಭ್ರಮೋತ್ಸವ ಹಾಗು ಪರಿಶಿಷ್ಟ ಜಾತಿಯ ಒಂದು ಸಾವಿರ ಬಡ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾವಳಪಡೂರು ಸೇವಾ ಸಹಕಾರಿ ಬ್ಯಾಂಕ್ ನಿ. ವಗ್ಗದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಕಾವಳ ಪಡೂರು ವಗ್ಗ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಜನಿ ಬಾಬು ಮೂಲ್ಯ, ಸತ್ಯ ಸಾರಮಾನಿ ಕ್ಷೇತ್ರ ಮುತ್ತೂರು ಪ್ರಧಾನ ಅರ್ಚಕರಾದ ಪೂಜ್ಯ ಹರಿಯಪ್ಪ ಮುತ್ತೂರು, ಬಹುಜನ ಸಮಾಜ ಪಕ್ಷ ದಕ್ಷಿಣ ಕನ್ನಡ ದ ಸಂಯೋಜಕರಾದ ಗೋಪಾಲ ಮುತ್ತೂರು, ಬಿಲ್ಲವ ಸಮಾಜ ಸೇವಾ ಸಂಘ (ರಿ) ವಗ್ಗ ಇದರ ಅಧ್ಯಕ್ಷರಾದ ವೀರೇಂದ್ರ ಅಮೀನ್, ಸಮಾಜ ಪರಿವರ್ತನಾ ಚಳುವಳಿಗಾರರಾದ ಅಣ್ಣು ಕಕ್ಕಿಬೆಟ್ಟು, ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘ (ರಿ) ಕಕ್ಕೆಪದವು ಇದರ ಗೌರವಾಧ್ಯಕ್ಷರಾದ ಅಣ್ಣು ಕಂಡಿಗ, ಡಾ.ಬಿ.ಆರ್ ಅಂಬೇಡ್ಕರ್ ಯುವಕ ಸಂಘ (ರಿ) ಕಕ್ಕೆಪದವು ಇದರ ಅಧ್ಯಕ್ಷರಾದ ರಾಜೀವ್ ಕಕ್ಕೆಪದವು, ಕಾವಳಪಡೂರು ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಶೇಖರ ಕೆ. ಕರ್ಣ, ಕಾವಳಪಡೂರು ಗ್ರಾಮ ಪಂಚಾಯತ್ ಸದಸ್ಯರಾದ ಭವಾನಿ ಶ್ರೀಧರ್ ಪೂಜಾರಿ, ಬಿಜೆಪಿ ಶಕ್ತಿ ಕೇಂದ್ರ, ಇದರ ಅದ್ಯಕ್ಷರಾದ ಸತೀಶ್ ಶೆಟ್ಟಿ ಮದ್ವಕಟ್ಟೆ, ಬಂಟ್ವಾಳ ತಾಲೂಕು ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘ (ರಿ) ಇದರ ಅಧ್ಯಕ್ಷರಾದ ಕೆ.ಸತೀಶ್ ಅರಳ ಮೊದಲಾದವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸೇವಾ ಸಹಕಾರಿ ಬ್ಯಾಂಕ್ ನಿ.ಬಡಗಕಜೆಕಾರು ನಿರ್ದೇಶಕರಾದ ಅನಿಲ್ ಕುರುವರಗೋಳಿ, ಪ್ರಗತಿಪರ ಕೃಷಿಕರಾದ ರಾಜೇಶ್ ಪೆರ್ಲ ಬೀಯಾಪಾದೆ, ಕಾವಳಪಡೂರು ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ವಸಂತಿ, ಉಳಿ ಗ್ರಾಮ ಪಂಚಾಯತಿಯ ಸದಸ್ಯರಾದ ಕುಮಾರಿ ರಕ್ಷಿತಾ ಮೊದಲಾದವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಬಹುಜನ ಸಾಹಿತಿ ಸತೀಶ್ ಕಕ್ಕೆಪದವು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಪ್ರವೀಣ್ ಸೂರ್ಯ ಹೊಸಂಗಡಿ ಕಾರ್ಯಕ್ರಮವನ್ನು ನಿರೂಪಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
7,500 ಕೆ.ಜಿ. ಹಳೆಯ ಮೀನು ವಶಕ್ಕೆ ಪಡೆದುಕೊಂಡ ಆಹಾರ ಸುರಕ್ಷತಾ ಅಧಿಕಾರಿಗಳು: ಮೀನಿನಲ್ಲೂ ವಿಷ!
ಪ್ರವಾದಿ ವಿರುದ್ಧ ಹೇಳಿಕೆ: ಮುಸ್ಲಿಮ್ ರಾಷ್ಟ್ರಗಳ ಖಂಡನೆ ಬೆನ್ನಲ್ಲೇ ತನ್ನ ನಿಲುವು ಸ್ಪಷ್ಟಪಡಿಸಿದ ಭಾರತ