ಸ್ವಾಮೀಜಿಗಳ ವೇಷ ತೊಟ್ಟು ದುಡ್ಡು ಕಲೆಕ್ಷನ್: ಮೂವರ ಬಂಧನ
ಬೆಂಗಳೂರು: ಸ್ವಾಮೀಜಿ ವೇಷ ತೊಟ್ಟು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ಟಿ.ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇವರು ಸ್ವಾಮೀಜಿ ವೇಷಭೂಷಣ ತೊಟ್ಟು ನೇರವಾಗಿ ಮನೆಗೆ ನುಗ್ಗುತ್ತಿದ್ದರು ಮತ್ತು ಮನೆಯವರು ಹಣ ಕೊಟ್ಟಿಲ್ಲ ಅಂದರೆ ಮನೆಮಂದಿಯನ್ನೆಲ್ಲ ನಿಂದಿಸುತ್ತಿದ್ದರು ಎನ್ನಲಾಗಿದೆ.
ಅರಸೀಕೆರೆಯ ರಾಮಯ್ಯ ಸೇರಿದಂತೆ ಮೂವರು ನಕಲಿ ಮಠಗಳ ಹೆಸರು ಹೇಳಿಕೊಂಡು ಜನರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದರು ಎನ್ನಲಾಗಿದೆ. ಜನರಿಗೆ ಸಂಶಯ ಬರಬಾರದೆಂದು ಆರೋಪಿಗಳು ವಾರಕ್ಕೊಮ್ಮೆ ಒಂದೊಂದು ಏರಿಯಾದಲ್ಲಿ ಗುರುತಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಅನುಮಾನಗೊಂಡ ಪೊಲೀಸರು ಇದೀಗ ಮಲ್ಲಸಂದ್ರ ದಿಂದ ಈ ಮೂವರು ಶಂಕಿತ ಸ್ವಾಮೀಜಿಗಳನ್ನು ಬಂಧಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮಗುವಿನ ಕೈಕಾಲು ಕಟ್ಟಿ ಬಿರುಬಿಸಿಲಿನಲ್ಲಿ ಮಲಗಿಸಿದ ಪಾಪಿ ತಾಯಿ!
ಕೇರಳದಲ್ಲಿ ಪತ್ತೆಯಾದ ಜೀರುಂಡೆ ಜ್ವರ: ವಿದ್ಯಾರ್ಥಿ ಸಾವು
ಕೋಲ್ಡ್ ಡ್ರಿಂಕ್ ನಲ್ಲಿ ಸತ್ತ ಹಲ್ಲಿ: ಮೆಕ್ ಡೊನಾಲ್ಡ್ಸ್ ಗೆ ವಿಧಿಸಿದ ದಂಡ ಎಷ್ಟು ಗೊತ್ತಾ?
ಮಹಿಳೆಯನ್ನು ಬಲಿ ಪಡೆದ ಆನ್ ಲೈನ್ ರಮ್ಮಿ ಆಟ: ರಮ್ಮಿ ವ್ಯಸನಿಗಳೇ ಎಚ್ಚರ!
ಮಹಿಳೆಯನ್ನು ಬಲಿ ಪಡೆದ ಆನ್ ಲೈನ್ ರಮ್ಮಿ ಆಟ: ರಮ್ಮಿ ವ್ಯಸನಿಗಳೇ ಎಚ್ಚರ!