ಕಾರು ತಡೆದಿದ್ದಕ್ಕೆ ಪೊಲೀಸರ ಮೇಲೆ ಕಿರುಚಾಡಿದ ಅರವಿಂದ ಲಿಂಬಾವಳಿ ಪುತ್ರಿ! | 10 ಸಾವಿರ ದಂಡ ವಿಧಿಸಿದ ಪೊಲೀಸರು!
ಬೆಂಗಳೂರು: ಕಾರು ತಡೆದಿದ್ದಕ್ಕೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರ ಪುತ್ರಿ ಪೊಲೀಸರೊಂದಿಗೆ ರೇಗಾಡಿದ ಘಟನೆ ನಡೆದಿದ್ದು, ಆದರೆ ಪ್ರಭಾವಕ್ಕೆ ಮಣಿಯದ ಪೊಲೀಸರು ತಮ್ಮ ಕರ್ತವ್ಯವನ್ನು ಮಾಡಿದ್ದು, 10 ಸಾವಿರ ದಂಡ ವಿಧಿಸಿದ್ದಾರೆ.
ವರದಿಗಳ ಪ್ರಕಾರ, ವೇಗವಾಗಿ ಬರುತ್ತಿದ್ದ ಬಿಎಂಡಬ್ಲ್ಯು ಕಾರ್ ನ್ನು ನೋಡಿದ ಎಸಿಪಿ ಕೈ ಅಡ್ಡಗಟ್ಟಿದ್ದಾರೆ. ಈ ವೇಳೆ ಅವರನ್ನು ಕ್ಯಾರೇ ಅನ್ನದೇ ವೇಗವಾಗಿ ತೆರಳಿದ ಕಾರು ಸಿಗ್ನಲ್ ಜಂಪ್ ಮಾಡಿದೆ ಎನ್ನಲಾಗಿದೆ. ಹೀಗಾಗಿ ಅವರು ವಾಕಿಟಾಕಿಗೆ ಸಂದೇಶ ನೀಡಿದ್ದು, ಹೀಗಾಗಿ ಪೊಲೀಸರು ಕಾರು ನಿಲ್ಲಿಸಿದ್ದಾರೆ.
ಪೊಲೀಸರು ಕಾರು ನಿಲ್ಲಿಸುತ್ತಿದ್ದಂತೆಯೇ ಇದು ಎಂಎಲ್ ಎ ಗಾಡಿ. ಲಿಂಬಾವಳಿ ಕಾರು ಗೊತ್ತಾ? ನಾನು ಶಾಸಕ ಅರವಿಂದ ಲಿಂಬಾವಳಿ ಪುತ್ರಿ ಎಂದೆಲ್ಲ ಯುವತಿ ಪೊಲೀಸರ ಮೇಲೆ ಏರುಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಈಕೆಯ ಚೀರಾಟಕ್ಕೆ ಮಣಿಯದ ಪೊಲೀಸರು ತಮ್ಮ ಕರ್ತವ್ಯ ಮಾಡಿದ್ದು, ದಂಡಪಾವತಿಸುವಂತೆ ಖಡಕ್ ಆಗಿ ಹೇಳಿದ್ದಾರೆ. ಕೊನೆಗೆ ವಿಧಿಯಿಲ್ಲದೇ ದಂಡಪಾವತಿಸಿ ಸ್ಥಳದಿಂದ ತೆರಳಿದ್ದಾರೆ ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಎನ್ ಎಸ್ ಯುಐ ಕಾರ್ಯಕರ್ತರ ಬಿಡುಗಡೆ: “ನಾಡಿಗಾಗಿ ಜೈಲಿಗೆ ಹೋಗಿದ್ದಕ್ಕೆ ಹೆಮ್ಮೆಯಿದೆ”
ಉದ್ಘಾಟನೆ ವೇಳೆಯೇ ಕುಸಿದು ಬಿದ್ದ ಸೇತುವೆ: ಮೇಯರ್ ಸಹಿತ 8 ಮಂದಿಗೆ ಗಾಯ!