ನೂಪುರ್ ಶರ್ಮಾ ಪ್ರತಿಕೃತಿಗೆ ನಡು ರಸ್ತೆಯಲ್ಲಿ ಗಲ್ಲು! | ಹಿಂದೂ ಸಂಘಟನೆಗಳಿಂದ ಆಕ್ರೋಶ
ಬೆಳಗಾವಿ: ಪ್ರವಾದಿ ಮೊಹಮ್ಮದ್ ಪೈಗಂಬರರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರ ಪ್ರತಿಕೃತಿಯನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಿದ ಸ್ಥಿತಿಯಲ್ಲಿ ಜೋತು ಹಾಕಲಾಗಿದೆ.
ಬೆಳಗಾವಿ ನಗರದ ಪೋರ್ಟ್ ರಸ್ತೆಯಲ್ಲಿ ಈ ದೃಶ್ಯ ಕಂಡು ಬಂದಿದ್ದು, ಈ ಪ್ರತಿಕೃತಿಯನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಕೆಲವು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಕೃತಿಯನ್ನು ಯಾರು ಜೋತು ಹಾಕಿದ್ದಾರೆನ್ನುವುದು ತಿಳಿದು ಬಂದಿಲ್ಲ. ಆದರೆ, ಇದು ಸಮಾಜದಲ್ಲಿ ಭಯ ಸೃಷ್ಟಿಸುವ ಹುನ್ನಾರವಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.
ಭಾರತ ತಾಲಿಬಾನ್ ಅಲ್ಲ. ಇಲ್ಲಿ ಗಲ್ಲಿಗೇರಿಸುವ ಸಂಸ್ಕೃತಿ ಇಲ್ಲ. ಗಲ್ಲಿಗೇರಿಸಲು ನ್ಯಾಯಾಂಗ ಇದೆ. ನೂಪುರ ಶರ್ಮಾ ಅವರ ಹೇಳಿಕೆ ತಪ್ಪಾಗಿದ್ದರೆ ನ್ಯಾಯಾಂಗ ಕ್ರಮ ಕ್ರಮ ಕೈಗೊಳ್ಳಬೇಕು. ಕೇಸು ದಾಖಲಿಸಿ ಸಾಧ್ಯವಾದರೆ ಬಂಧಿಸಲಿ. ಆದರೆ ಈ ತರಹ ಗಲ್ಲಿಗೇರಿಸುವ ಮೂಲಕ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುವ ಹುನ್ನಾರ ನಡೆದಿದೆ ಎಂದು ಮಹಾನಗರ ಪಾಲಿಕೆ ಪಕ್ಷೇತರ ಸದಸ್ಯ ಶಂಕರ ಪಾಟೀಲ ಆರೋಪಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ರಾಜ್ಯಸಭೆ ಕದನ ಶುರು: ವಿಧಾನಸೌಧಕ್ಕೆ ಆಗಮಿಸಿ ಮತಚಲಾಯಿಸುತ್ತಿರುವ ಶಾಸಕರು
ಕಾರು ತಡೆದಿದ್ದಕ್ಕೆ ಪೊಲೀಸರ ಮೇಲೆ ಕಿರುಚಾಡಿದ ಅರವಿಂದ ಲಿಂಬಾವಳಿ ಪುತ್ರಿ! | 10 ಸಾವಿರ ದಂಡ ವಿಧಿಸಿದ ಪೊಲೀಸರು!
ಎನ್ ಎಸ್ ಯುಐ ಕಾರ್ಯಕರ್ತರ ಬಿಡುಗಡೆ: “ನಾಡಿಗಾಗಿ ಜೈಲಿಗೆ ಹೋಗಿದ್ದಕ್ಕೆ ಹೆಮ್ಮೆಯಿದೆ”
ಉದ್ಘಾಟನೆ ವೇಳೆಯೇ ಕುಸಿದು ಬಿದ್ದ ಸೇತುವೆ: ಮೇಯರ್ ಸಹಿತ 8 ಮಂದಿಗೆ ಗಾಯ!
ಪ್ರೇಯಸಿಯ ಮೇಲಿನ ಕೋಪದಿಂದ ಮ್ಯೂಸಿಯಮ್ ಗೆ ನುಗ್ಗಿ ಪ್ರಾಚೀನ ವಸ್ತುಗಳನ್ನು ಪುಡಿಗೈದ ಯುವಕ!