ಲೈಂಗಿಕ ದೌರ್ಜನ್ಯ ವಿರೋಧಿಸಿದ ಮಹಿಳೆ ಪೇಪರ್ ಕಟರ್ ನಿಂದ ಹಲ್ಲೆ: ಮಹಿಳೆ ಮುಖಕ್ಕೆ 118 ಹೊಲಿಗೆ!

ಭೋಪಾಲ್: ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ವಿಫಲ ಯತ್ನ ನಡೆಸಿದ ದುಷ್ಕರ್ಮಿಗಳು, ಪೇಪರ್ ಕಟರ್ ನಿಂದ ಮಹಿಳೆಯ ಮುಖಕ್ಕೆ ಗಂಭೀರವಾದ ಗಾಯ ಮಾಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.
ಶುಕ್ರವಾರ ಈಕೆ ತನ್ನ ಪತಿಯೊಂದಿಗೆ ಟಿಟಿ ನಗರದ ರೋಷನ್‌ಪುರದ ಶ್ರೀ ಪ್ಯಾಲೇಸ್ ಹೋಟೆಲ್ ಗೆ ತೆರಳುತ್ತಿದ್ದ ವೇಳೆ ದಾಳಿ ನಡೆದಿದೆ. ಇವರ ನಡುವೆ ಬೈಕ್ ಪಾರ್ಕಿಂಗ್ ವಿಚಾರವಾಗಿ ಜಗಳ ನಡೆದಿದೆ. ಘಟನೆಯ ನಂತರ ಮಹಿಳೆ ತನ್ನ ಪತಿಯೊಂದಿಗೆ ಹೋಟೆಲ್‌ಗೆ ಹೋಗಿದ್ದಳು. ದಂಪತಿಗಳು ಹೋಟೆಲ್‌ನಿಂದ ಹೊರಬಂದಾಗ ಆರೋಪಿಗಳು ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದು, ಈ ವೇಳೆ ಮಹಿಳೆ ವಿರೋಧಿಸಿದಾಗ ಆಕೆಯ ಮುಖಕ್ಕೆ ಪೇಪರ್ ಕಟರ್ ನಿಂದ ಇರಿದು ಗಾಯಗೊಳಿಸಿದ್ದಾರೆ. ಗಂಭೀರ ಗಾಯಗೊಂಡ ಈಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆರೋಪಿಗಳ ಹಲ್ಲೆಯಿಂದಾಗಿ ಮಹಿಳೆ ಮುಖಕ್ಕೆ ಬರೋಬ್ಬರಿ 118 ಹೊಲಿಗೆಗಳನ್ನು ಹಾಕಲಾಗಿದೆ. ಹಲ್ಲೆ ನಡೆಸಿದ ಆರೋಪಿಗಳಾದ ಬಾದಶಾ ಬೇಗ್ ಮತ್ತು ಅಜಯ್ ಅಲಿಯಾಸ್ ಬಿಟ್ಟಿ ಸಿಬ್ಡೆಯನ್ನು ಬಂಧಿಸಲಾಗಿದ್ದು, ಮೂರನೇ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ದಂಪತಿಯನ್ನು ಭೇಟಿ ಮಾಡಿ ಅವರ ಚಿಕಿತ್ಸೆಗೆ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ಭರವಸೆ ನೀಡಿದರು. ಮಹಿಳೆಯ ಧೈರ್ಯವನ್ನು ಶ್ಲಾಘಿಸಿದ ಚೌಹಾಣ್ ಆಕೆಗೆ 1 ಲಕ್ಷ ರೂ. ನೆರವು ನೀಡಿದ್ದಲ್ಲದೇ ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರನ ಹತ್ಯೆಗೆ ಸಂಚು?: ದೂರು ದಾಖಲು
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು
ಮುಂದುವರಿದ ತಿಥಿ ಕಾರ್ಡ್ ಫೈಟ್: ಕುಮಾರಸ್ವಾಮಿ ಹೆಸರಿನ ಕೈಲಾಸ ಸಮಾರಾಧನೆ ಚಿತ್ರ ವೈರಲ್!
ಅಡ್ಡಮತದಾನ ಮಾಡಿದವರ ಹೆಸರಲ್ಲಿ ಕೈಲಾಸ ಸಮಾರಾಧನೆ ಪತ್ರ!
ಭಾರತ-ಬಾಂಗ್ಲಾದೇಶಕ್ಕೆ ಅಂತರ್ದೇಶಿಯ ಬಸ್ ಸೇವೆ ಪುನರಾರಂಭ