ಜಿಮ್ ನಲ್ಲಿ ವರ್ಕೌಟ್ ವೇಳೆ ಕುಸಿದು ಬಿದ್ದು ಯುವಕ ಸಾವು!
ಮಧುರೈ: ಜಿಮ್ ನಲ್ಲಿ ವರ್ಕೌಟ್ ಮಾಡಿದ ಬಳಿ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಮಧುರೈ ಪಾಲಂಗಂಟಂನಲ್ಲಿ ನಡೆದಿದ್ದು, ಕುಸಿದು ಬಿದ್ದ ಯುವಕನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
27 ವರ್ಷ ವಯಸ್ಸಿನ ಶ್ರೀ ವಿಷ್ಣು ಮೃತ ಯುವಕ ಎಂದು ಗುರುತಿಸಲಾಗಿದ್ದು, ರಾತ್ರಿ 8:30ರ ವರೆಗೆ ಕೆಲಸ ಮಾಡಿ, 9 ಗಂಟೆಯ ಸುಮಾರಿಗೆ ಈತ ಜಿಮ್ ಗೆ ತೆರಳಿದ್ದಾನೆ. ವರ್ಕೌಟ್ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾನೆ.
ಯುವಕ ಕುಸಿದು ಬೀಳುತ್ತಿದ್ದಂತೆಯೇ ತಕ್ಷಣವೇ ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಯುವಕ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಘಟನೆ ಜೂನ್ 4ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ಯುವಕನಿಗೆ ಯಾವುದೇ ದುಷ್ಚಟಗಳು ಕೂಡ ಇರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಲೈಂಗಿಕ ದೌರ್ಜನ್ಯ ವಿರೋಧಿಸಿದ ಮಹಿಳೆ ಪೇಪರ್ ಕಟರ್ ನಿಂದ ಹಲ್ಲೆ: ಮಹಿಳೆ ಮುಖಕ್ಕೆ 118 ಹೊಲಿಗೆ!
ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರನ ಹತ್ಯೆಗೆ ಸಂಚು?: ದೂರು ದಾಖಲು
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು
ಮುಂದುವರಿದ ತಿಥಿ ಕಾರ್ಡ್ ಫೈಟ್: ಕುಮಾರಸ್ವಾಮಿ ಹೆಸರಿನ ಕೈಲಾಸ ಸಮಾರಾಧನೆ ಚಿತ್ರ ವೈರಲ್!