ತಂಗಿಯ ಚಿತೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಅಣ್ಣ! - Mahanayaka

ತಂಗಿಯ ಚಿತೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಅಣ್ಣ!

madhyapradesha
14/06/2022

ಮಧ್ಯಪ್ರದೇಶ: ತಂಗಿಯ ಸಾವಿನಿಂದ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ತಂಗಿಯ ಚಿತೆಗೆ ಹಾರಿದ 21 ವರ್ಷದ ಯುವಕ ತೀವ್ರ ಸುಟ್ಟಗಾಯಗಳಿಂದ ಸಾವನ್ನಪ್ಪಿದ್ದ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ.

ಮಜ್ಗವಾನ್ ಗ್ರಾಮದ ಬಾವಿಯೊಂದರಲ್ಲಿ ಜ್ಯೋತಿ ದಾಗಾ ಎಂಬ ಬಾಲಕಿ ಬಿದ್ದು ಸಾವನ್ನಪ್ಪಿದ್ದಳು. ಅಂದೇ ಅಂತ್ಯಸಂಸ್ಕಾರ ಕೂಡ ನಡೆಯಿತು.  ಸಂಸ್ಕಾರ ಮುಗಿಸಿ ಸಂಬಂಧಿಕರು ಮನೆಗೆ ಬಂದರೂ ಬಾಲಕಿಯ ಸಂಬಂಧಿ ಕರಣ್ ಸ್ಮಶಾನಕ್ಕೆ ವಾಪಸಾಗಿದ್ದ.

ಸ್ಮಶಾನಕ್ಕೆ ಬಂದ ಕಿರಣ್ ಅಕ್ಕನ ಚಿತೆಗೆ ನಮಸ್ಕರಿಸಿ ಅದರೊಳಗೆ ಹಾರಿದ.  ಜನರು ಓಡಿ ಬಂದು ಆತನನ್ನು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ತಕ್ಷಣ ಗ್ರಾಮಸ್ಥರು ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಕುಟುಂಬದವರು ಸ್ಮಶಾನಕ್ಕೆ ಬಂದು  ಕಿರಣ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.ಈವಾಗ ಪೋಲಿಸರು ಎರಡೂ ಪ್ರಕರಣಗಳ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಚಿವರ ಪುತ್ರನ ಮೇಲೆ ಅತ್ಯಾಚಾರ ಆರೋಪ ಮಾಡಿದ ಯುವತಿ ಮೇಲೆ ಇಂಕ್ ದಾಳಿ

ಒಂದೆಡೆ ಪ್ರತಿಭಟನೆ ಮತ್ತೊಂದೆಡೆ ರಾಹುಲ್ ಗಾಂಧಿ ವಿಚಾರಣೆ!

ಬಸ್, ಟೆಂಪೋ ಟ್ರಾವೆಲ್ ಮೇಲೆ ಉರುಳಿ ಬಿದ್ದ ಬೃಹತ್ ಮರ!

ಇಡಿ ಕಚೇರಿಗೆ ರಾಹುಲ್ ಗಾಂಧಿ ಅಧಿಕಾರಿಗಳಿಂದ ಹಾಜರು

ಜಿಮ್ ನಲ್ಲಿ ವರ್ಕೌಟ್ ವೇಳೆ ಕುಸಿದು ಬಿದ್ದು ಯುವಕ ಸಾವು!

ಇತ್ತೀಚಿನ ಸುದ್ದಿ