6 ಗಂಟೆಗಳಲ್ಲಿ 24 ಮೊಟ್ಟೆ ಇಟ್ಟ ಕೋಳಿ: ಅಚ್ಚರಿಗೀಡಾದ ಜನ

ಆಲಪ್ಪುಳ: 6 ಗಂಟೆಗಳ ಅವಧಿಯಲ್ಲಿ ಕೋಳಿಯೊಂದು 24 ಮೊಟ್ಟೆಗಳನ್ನಿಟ್ಟ ಅಪರೂಪದ ಘಟನೆಯೊಂದು ಕೇರಳದ ಆಲಪ್ಪುಳದಲ್ಲಿ ನಡೆದಿದ್ದು, ಈ ಘಟನೆಯಿಂದ ಮನೆ ಮಾಲಿಕರು ಹಾಗೂ ಸ್ಥಳೀಯರು ಅಚ್ಚರಿಗೀಡಾಗಿದ್ದಾರೆ.
ಆಲಪ್ಪುಳದ ಪುನ್ನಪ್ರದ ಬಿಜುಕುಮಾರ್ ಎಂಬುವವರ ಬಿವಿ-380 ಹೈಬ್ರಿಡ್ ಜಾತಿಯ ಕೋಳಿ ಬೆಳಗ್ಗೆ 8.30ರಿಂದ ಮಧ್ಯಾಹ್ನ 2:30ರ ನಡುವೆ 24 ಮೊಟ್ಟೆಗಳನ್ನು ಇಟ್ಟಿದೆ.
ಕೋಳಿ ಕುಂಟುತ್ತಿರುವುದನ್ನು ಗಮನಿಸಿದ ಬಿಜುಕುಮಾರ್ ತೈಲ ಹಚ್ಚಿ ನಿಲ್ಲಿಸಿದರು. ಸ್ವಲ್ಪ ಸಮಯದ ನಂತರ ಕೋಳಿ ಮೊಟ್ಟೆ ಇಡಲು ಆರಂಭಿಸಿತು. ಈ ಅಚ್ಚರಿಯ ವಿಚಾರ ನೆರೆಯ ಮನೆಯವರಿಗೆ ತಿಳಿಯುತ್ತಿದ್ದಂತೆಯೇ, ಕೋಳಿ ಮೊಟ್ಟೆ ಇಡುತ್ತಿರುವುದನ್ನು ನೋಡಲು ಸ್ಥಳೀಯರೂ ಬಂದು ಸೇರಿದರು.
ಮಧ್ಯಾಹ್ನ 2:30ರವರೆಗೂ ಕೋಳಿ ಮೊಟ್ಟೆ ಇಡುತ್ತಿತ್ತು. ಈ ರೀತಿಯಾಗಿ ಕೋಳಿ ಮೊಟ್ಟೆ ಇಡುತ್ತಿರುವುದನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇವೆ ಎಂದು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದರು.
ಏಳು ತಿಂಗಳ ಹಿಂದೆ ಬಿಜು ಅವರು 23 ಕೋಳಿಗಳನ್ನು ಬ್ಯಾಂಕ್ ನಿಂದ ಸಾಲ ಪಡೆದು ಖರೀದಿಸಿದ್ದರು. ಅದರಲ್ಲಿ ಒಂದು ಕೋಳಿ ಈ ರೀತಿಯ ಅಚ್ಚರಿಯನ್ನು ಸೃಷ್ಟಿಸಿದೆ. ಈ ಕೋಳಿಯನ್ನು ಬಿಜು ಅವರ ಮಗಳು ಪ್ರೀತಿಯಿಂದ ಚಿನ್ನು ಎಂದು ಕರೆಯುತ್ತಿದ್ದಳು. ಇದೀಗ ಈ ಕೋಳಿ ಅಚ್ಚರಿಯನ್ನು ಸೃಷ್ಟಿಸಿದೆ.
ಕೋಳಿ ಈ ರೀತಿಯಲ್ಲಿ ಮೊಟ್ಟೆ ಇಡಲು ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ತಜ್ಞರು ಕೂಡ ಈ ಘಟನೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನು ಅರ್ಥ ಮಾಡಿಕೊಳ್ಳಲು ವೈಜ್ಞಾನಿಕ ಅಧ್ಯಯನಗಳ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ತಂಗಿಯ ಚಿತೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಅಣ್ಣ!
ಸಚಿವರ ಪುತ್ರನ ಮೇಲೆ ಅತ್ಯಾಚಾರ ಆರೋಪ ಮಾಡಿದ ಯುವತಿ ಮೇಲೆ ಇಂಕ್ ದಾಳಿ
ಒಂದೆಡೆ ಪ್ರತಿಭಟನೆ ಮತ್ತೊಂದೆಡೆ ರಾಹುಲ್ ಗಾಂಧಿ ವಿಚಾರಣೆ!