ಕುಡುಕ ತಂದೆಗೆ ಹೆದರಿ ತೋಟದಲ್ಲಿ ಅಡಗಿ ಕುಳಿತ ಬಾಲಕಿ ಹಾವು ಕಡಿದು ಸಾವು!
ಕೊಟ್ಟಾಯಂ: ಕುಡುಕ ತಂದೆಗೆ ಹೆದರಿ ಮನೆಯ ಸಮೀಪದ ತೋಟದಲ್ಲಿ ಅಡಗಿ ಕುಳಿತಿದ್ದ ನಾಲ್ಕು ವರ್ಷದ ಬಾಲಕಿ ಹಾವು ಕಚ್ಚಿ ಸಾವನ್ನಪ್ಪಿರುವ ದಾರುಣ ಘಟನೆ ಕೇರಳದ ಕೊಟ್ಟಾಯಂನ ತಿರುವಟ್ಟಾರ್ ಸಮೀಪದ ಕುಟ್ಟಕ್ಕಾಡ್ ಪಲಾವಿಲಾ ಎಂಬಲ್ಲಿ ನಡೆದಿದೆ.
ಸುರೇಂದ್ರನ್ ಅವರ ಪುತ್ರಿ ಸುಶ್ವಿಕಾ ಮೋಲ್ ಮೃತಪಟ್ಟ ಬಾಲಕಿಯಾಗಿದ್ದು, . ಪೊಲೀಸರ ಪ್ರಕಾರ, ಕೂಲಿ ಕಾರ್ಮಿಕನಾದ ಸುರೇಂದ್ರನ್ ದಿನಾ ಕುಡಿದು ಬಂದು ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ. ಸೋಮವಾರ ರಾತ್ರಿಯೂ ಸುರೇಂದ್ರನ್ ಕುಡಿದು ಚಿತ್ತಾಗಿ ಮನೆಗೆ ಬಂದು ಜಗಳ ಆರಂಭಿಸಿದ್ದ.
ತಂದೆಯ ಜಗಳದಿಂದ ಬೆದರಿದ ಬಾಲಕಿ ತನ್ನ ಸಹೋದರರಾದ ಸುಶ್ವಿನ್ ಶಿಜೋ , ಸುಜಿಲಿಂಜೋ ಜೊತೆಗೆ ಸಮೀಪದ ರಬ್ಬರ್ ತೋಟದಲ್ಲಿ ಅಡಗಿ ಕುಳಿತಿದ್ದು, ಈ ವೇಳೆ ಬಾಲಕಿಗೆ ಹಾವು ಕಚ್ಚಿದೆ.
ಹಾವು ಕಚ್ಚಿದ ವೇಳೆ ಮನೆಗೆ ಅಳುತ್ತಾ ಬಂದ ಸುಶ್ವಿಕಾ ಹಾವು ಕಚ್ಚಿದೆ ಎಂದು ಅತ್ತಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆಯ ಜೀವ ಉಳಿಸಲು ಸಾಧ್ಯವಾಗಿಲ್ಲ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಡ್ರಗ್ಸ್ ನ್ನು ನಿಷೇಧಿಸಿರುವ ಸರ್ಕಾರಗಳು ಮದ್ಯ ನಿಷೇಧ ಮಾಡಿಲ್ಲ. ಇದರಿಂದಾಗಿ ಎಷ್ಟೋ ಮನೆಯ ಬಡ ಮಕ್ಕಳ ಜೀವನ ನಿತ್ಯ ನರಕವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ರಸ್ತೆಗೆ ಉರುಳಿ ಬಿದ್ದಿದ್ದ ಮರಕ್ಕೆ ಬೈಕ್ ಡಿಕ್ಕಿ: ಬೈಕ್ ಸವಾರ ಸಾವು
ಏಕಾಏಕಿ ಹೃದಯ ಬಡಿತ ಹೆಚ್ಚಳ: ಆಸ್ಪತ್ರೆಗೆ ದಾಖಲಾದ ದೀಪಿಕಾ ಪಡುಕೋಣೆ
ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ಬಗ್ಗೆ ಅವಹೇಳನ: ಯುವಕ ಅರೆಸ್ಟ್
ಮೆಟ್ರೋ ಕಾಮಗಾರಿಯ ಕಾರ್ಮಿಕನನ್ನು ಇರಿದು ಹತ್ಯೆ ಮಾಡಿದ ಪಾಪಿಗಳು!
ವಿವಾಹದ ಬಳಿಕ ವೃತ್ತಿ ಜೀವನದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡ ನಯನತಾರಾ