ಹಸುವಿಗೆ ಚಿಕಿತ್ಸೆ ಕೊಡುವ ನೆಪದಲ್ಲಿ ಕರೆದು ಪಶುವೈದ್ಯನಿಗೆ ಬಲವಂತದ ಮದುವೆ!
ಬಿಹಾರದ ಟೆಗ್ರಾ ಹಸುವಿಗೆ ಚಿಕಿತ್ಸೆ ಕೊಡಬೇಕು ಎಂದು ಪಶುವೈದ್ಯರನ್ನು ಕರೆಸಿ ಬಲವಂತದ ಮದುವೆವಾಗಿ ಮದುವೆ ನಡೆಸಿದ ಘಟನೆ ಪಿಧೌಲಿ ಗ್ರಾಮದಲ್ಲಿ ವರದಿಯಾಗಿದೆ.
ಹಸುವಿಗೆ ಚಿಕಿತ್ಸೆ ಬೇಕು ಎಂದು ವಧುವಿನ ಮನೆಯವರು ಪಶುವೈದ್ಯ ಸತ್ಯಂಕುಮಾರ್ ಅವರನ್ನು ಕರೆತಂದಿದ್ದರು. ನಂತರ ಸ್ಥಳಕ್ಕಾಗಮಿಸಿದಾಗ ವೈದ್ಯರನ್ನು ಬಲವಂತವಾಗಿ ಮಹಿಳೆಯ ಜೊತೆ ಮದುವೆ ಮಾಡಿಸಿದ್ದಾರೆ ಎನ್ನಲಾಗಿದೆ. ಪುರುಷನನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸುವ ಸಂಪ್ರದಾಯವಿದ್ದು ಇಂತಹ ಆಚಾರಕ್ಕೆ “ಪಕಡುವ”ಎಂದು ಕರೆಯಲಾಗುತ್ತದೆ.
ಈ ಘಟನೆಗೆ ಸಂಬಂಧಿಸಿದಂತೆ ವೈದ್ಯರ ತಂದೆ ಸುಬೋಧ್ ಕುಮಾರ್ ಝಾ ಮೂವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪಶುವೈದ್ಯರಾಗಿದ್ದ ತನ್ನ ಮಗ ಸತ್ಯಂ ಕುಮಾರ್ ನನ್ನು ಹಸ್ಸನ್ ಪುರದ ಗ್ರಾಮದ ವಿಜಯ್ ಸಿಂಗ್ ಎಂಬಾತ ಕರೆದೊಯ್ದು ತಮ್ಮ ಮಗನನ್ನು ಮಹಿಳೆಯೊಂದಿಗೆ ಮದುವೆಯಾಗಲು ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ವರನನ್ನು ಬಲವಂತವಾಗಿ ಕರೆದೊಯ್ದು ಮದುವೆ ಮಾಡಲಾಗಿದೆಯೇ ಅಥವಾ ಅವರ ಸ್ವಂತ ಇಚ್ಛೆಯಿಂದ ಮದುವೆಯಾಗಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸರಿಗೆ ದೂರು ನೀಡಿದರೂ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಆದಾಗ್ಯೂ, ಏನಾಯಿತು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಬೇಗುಸರೈ ಎಸ್ಪಿ ಯೋಗೇಂದ್ರ ಕುಮಾರ್ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ತುಮಕೂರು: ಡಿಎಸ್ ಎಸ್ ಮುಖಂಡನನ್ನು ಕೊಚ್ಚಿ ಬರ್ಬರ ಹತ್ಯೆ
ಕುಮಾರಸ್ವಾಮಿ ಎಲ್ ಕೆಜಿ ಮಗುನಾ? ತಿಥಿ ಕಾರ್ಡ್ ಬಳಕೆ ಗೆ ಸಿಎಂ ಇಬ್ರಾಹಿಂ ಕಿಡಿ
ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಹಂಸಲೇಖ ಮಹತ್ವದ ಹೇಳಿಕೆ!
ಯೋಗ ದಿನ: ಮೈಸೂರು ಮಹಾರಾಜರಿಗೆ ಆಹ್ವಾನ ಯಾಕಿಲ್ಲ? | ಪ್ರತಾಪ್ ಸಿಂಹ ಹೇಳಿದ್ದೇನು?
ಮಳಲಿ ಮಸೀದಿ ವಿವಾದ: ಯಾವುದೇ ಆದೇಶ ಮಾಡದಂತೆ ಹೈಕೋರ್ಟ್ ನಿರ್ದೇಶನ