ಕಾಶ್ಮೀರ ಹತ್ಯಾಕಾಂಡಕ್ಕೂ ದನ ಸಾಗಾಟದ ಹೆಸರಿನ ಹತ್ಯಾಕಾಂಡಕ್ಕೂ ವ್ಯತ್ಯಾಸವಿಲ್ಲ: ನಟಿ ಸಾಯಿ ಪಲ್ಲವಿ - Mahanayaka
9:09 AM Thursday 12 - December 2024

ಕಾಶ್ಮೀರ ಹತ್ಯಾಕಾಂಡಕ್ಕೂ ದನ ಸಾಗಾಟದ ಹೆಸರಿನ ಹತ್ಯಾಕಾಂಡಕ್ಕೂ ವ್ಯತ್ಯಾಸವಿಲ್ಲ: ನಟಿ ಸಾಯಿ ಪಲ್ಲವಿ

sai pallavi
16/06/2022

ಕಾಶ್ಮೀರದಲ್ಲಿ ನಡೆದ ಹತ್ಯಾಕಾಂಡಕ್ಕೂ ದನ ಸಾಗಾಟದ ಹೆಸರಿನಲ್ಲಿ ನಡೆಯುವ ಹತ್ಯಾಕಾಂಡಕ್ಕೂ ಯಾವುದೇ  ವ್ಯತ್ಯಾಸವಿಲ್ಲ ಎಂದು ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಹೇಳಿದ್ದಾರೆ.

ಜೂನ್ 17 ರಂದು ಬಿಡುಗಡೆಯಾಗಲಿರುವ ವಿರಾಟ ಪರ್ವಂ ಚಿತ್ರದ ಪ್ರಚಾರದ ಭಾಗವಾಗಿ ಸಂದರ್ಶನವೊಂದರಲ್ಲಿ ಸಾಯಿ ಪಲ್ಲವಿ , ಈ ಪ್ರಸ್ತಾವನೆಯನ್ನು ಹೇಳಿದ್ದಾರೆ.  ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯೆ ಹಾಗೂ ದನದ ಸಾಗಾಟದ ಹೆಸರಿನಲ್ಲಿ ನಡೆಯುತ್ತಿರುವ ಹತ್ಯೆ ಎರಡೂ ಒಂದೇ ಆಗಿದೆ ಎಂದಿರುವ ಸಾಯಿ ಪಲ್ಲವಿ ಹೇಳಿಕೆಯನ್ನು  ಬಲಪಂಥೀಯ ವಿಚಾರಧಾರೆಯುಳ್ಳ ಮಾಧ್ಯಮಗಳು ವಿವಾದಾತ್ಮಕ ಹೇಳಿಕೆ ಎಂದು ಕರೆದಿವೆ.

ಹತ್ಯೆ ಯಾವುದೇ ಆಗಿದ್ದರೂ ಅದು ಹತ್ಯೆ ಎಂದೇ ಪರಿಗಣನೆಯಾಗಬೇಕು. ಈ ಕಾರಣಕ್ಕೆ ಹತ್ಯೆಯಾಗಿದ್ದು ಸರಿ, ಈ ಕಾರಣಕ್ಕೆ ಹತ್ಯೆಯಾಗಿರೋದು ತಪ್ಪು ಎಂದು ಹೇಳುವುದು ಭಾರತೀಯ ಕಾನೂನಿಗೆ ವಿರುದ್ಧವಾಗಿದೆ. ಒಬ್ಬ ವ್ಯಕ್ತಿಯನ್ನು ಕೊಲ್ಲುವ ಹಕ್ಕು, ಶಿಕ್ಷಿಸುವ ಹಕ್ಕು ನಮ್ಮ ದೇಶದಲ್ಲಿಲ್ಲ. ಈ ನಿಟ್ಟಿನಲ್ಲಿ ಸಾಯಿ ಪಲ್ಲವಿ ಹೇಳಿಕೆ ಸರಿಯಾಗಿದೆ. ಆದರೆ ಈ ವಿಚಾರದಲ್ಲಿ  ಅನಗತ್ಯವಾಗಿ ವಿವಾದ ಸೃಷ್ಟಿಸಲಾಗಿದೆ ಎನ್ನಲಾಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪೊಲೀಸ್ ಠಾಣೆಯಲ್ಲೇ ಪಿಎಸ್ ಐ ಹರೀಶ್ ಅರೆಸ್ಟ್!

ಅಲ್ಪಸಂಖ್ಯಾತ ಸಮಾವೇಶದಲ್ಲಿ ಎಂಟಿಬಿ ‘ನಾಗಿಣಿ’ ಡಾನ್ಸ್!

ನರೇಂದ್ರ ಮೋದಿ ನಾಯಿಗಿಂತಲೂ ಕಡೆಯಾಗಿ ಸಾಯುತ್ತಾನೆ: ನಾಲಿಗೆ ಹರಿಯಬಿಟ್ಟ ಕಾಂಗ್ರೆಸ್ ನಾಯಕ

ಹಸುವಿಗೆ ಚಿಕಿತ್ಸೆ ಕೊಡುವ ನೆಪದಲ್ಲಿ ಕರೆದು ಪಶುವೈದ್ಯನಿಗೆ ಬಲವಂತದ ಮದುವೆ!

ನೂತನ ಲೋಕಾಯುಕ್ತರಾಗಿ ಬಿ.ಎಸ್‌.ಪಾಟೀಲ ಪ್ರಮಾಣವಚನ ಸ್ವೀಕಾರ

ಇತ್ತೀಚಿನ ಸುದ್ದಿ