ಮೋದಿ ಬಂದು ಹೋಗಲಿ, ಕಾಲೇಜಿಗಳಿಗೆ ರಜೆ ಏಕೆ?: ಡಿ.ಕೆ.ಶಿವಕುಮಾರ್  - Mahanayaka
9:12 AM Thursday 12 - December 2024

ಮೋದಿ ಬಂದು ಹೋಗಲಿ, ಕಾಲೇಜಿಗಳಿಗೆ ರಜೆ ಏಕೆ?: ಡಿ.ಕೆ.ಶಿವಕುಮಾರ್ 

dk shivakumar
19/06/2022

ಬೆಂಗಳೂರು: ಮೋದಿ ಹಾದು ಹೋಗುವ ಮಾರ್ಗದಲ್ಲಿ ಕಾಲೇಜುಗಳಿಗೆ ಯಾಕೆ ರಜೆ ಘೋಷಿಸಲಾಗಿದೆ? ವಿದ್ಯಾರ್ಥಿಗಳು ಏನು ಟೆರರಿಸ್ಟ್ ಗಳಾ ?ಮೋದಿ ಬಂದು ಹೋಗಲಿ ಬೇಡ ಅಂದವರ್ಯಾರು. ಅದು ಅವರವರ ಪಕ್ಷಕ್ಕೆ ಸಂಬಂಧಿಸಿದ್ದುಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

ಇಂದು ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸ್ವಾಮೀಜಿಗಳು ಸರ್ಕಾರಕ್ಕೆ ಹೆದರಿಕೊಂಡಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಟ್ವೀಟ್ ಅಷ್ಟೇ ಮಾಡುತ್ತಿದ್ದಾರೆ. ಬಾಲಗಂಗಾಧರನಾಥ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಶಂಕರಾಚಾರ್ಯ ಎಲ್ಲರ ಬಗ್ಗೆಯೂ ಪಠ್ಯದಲ್ಲಿ ಅವಮಾನ ಆಗಿದೆ. ಸರ್ಕಾರಕ್ಕೆ ಹೆದರಿಕೊಳ್ಳದೆ ಧ್ವನಿ ಎತ್ತಬೇಕು ಎಂದರು.

ಕೆಲವು ಸ್ವಾಮೀಜಿಗಳು ಟ್ವೀಟ್ ಮಾಡಿ ದೂರು ಕೊಡುವ ಕೆಲಸ ಮಾಡಿದ್ದಾರೆ. ಆದರೆ ಇನ್ನಷ್ಟು ಸ್ವಾಮೀಜಿಗಳು ಧ್ವನಿ ಎತ್ತಬೇಕು. ಸ್ವಾಮೀಜಿಗಳು ರಾಜಕಾರಣಕ್ಕೆ ಬೆಂಬಲ ಕೊಡುವುದು ಬೇಡ. ಸ್ವಾಮೀಜಿಗಳಿರುವುದು ಸಂಸ್ಕೃತಿ, ನ್ಯಾಯ ಉಳಿಸಲು ಸರ್ಕಾರಕ್ಕೆ ಹೆದರಿಕೊಂಡು ಸುಮ್ಮನಿರಿವುದು ಬೇಡ. ಅವರೇ ಧ್ವನಿ ಎತ್ತದಿದ್ದರೆ ಯಾರು ಎತ್ತಬೇಕು? ಎಂದು ಪ್ರಶ್ನಿಸಿದರು.

ಬಿಜೆಪಿಯವರು ಡಿಕೆಶಿ ಹಿಂದೂ ವಿರೋಧಿ ಎಂಬ ಟ್ವೀಟ್ ವಿಚಾರ ಮಾತನಾಡಿದ ಅವರು, ನಾನು ಹಿಂದೂ ಧರ್ಮೀಯ. ಎಲ್ಲ ಧರ್ಮಕ್ಕೂ ಗೌರವ ಕೊಡಬೇಕು. ನನ್ನ ಕ್ಷೇತ್ರದಲ್ಲಿ 300-400 ದೇವಸ್ಥಾನಗಳನ್ನ ಜೀರ್ಣೋದ್ಧಾರ ಮಾಡಿಸಿದ್ದೇನೆ. ಇದನ್ನ ಬೇಕಾದ್ರೆ ಬಂದು ನೋಡಲಿ. ಮತ್ತು ಪಕ್ಷದಲ್ಲಿ ನಾವು ಯಾರಿಗೆ ಬೇಕಾದರೂ ಅಧಿಕಾರ ಕೊಡ್ತೇವೆ. ಇವರಿಗೆ ಏನಾಗಬೇಕು. ಅವರಿಗೆ ನಮ್ಮ ಯುವಕರ ಬಗ್ಗೆ ಭಯವಿದೆ‌. ಸಂಘಟನೆಗಳ ಬಗ್ಗೆ ಭಯವಿದೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಆಕಾಶದಲ್ಲೇ ವಿಮಾನದ ರೆಕ್ಕೆಗೆ ಹತ್ತಿಕೊಂಡ ಬೆಂಕಿ!

ಇನ್ನೇನು ಅಂತ್ಯಕ್ರಿಯೆ ಮಾಡಬೇಕು ಅನ್ನೋವಷ್ಟರಲ್ಲಿ ಎಣ್ಣೆ ಹೊಡೆದು ತೂರಾಡುತ್ತಾ ಬಂದ ಸತ್ತ ವ್ಯಕ್ತಿ!

ಜೀವನ ಸಾಗಿಸಲು ಬೀದಿ ಬದಿ ಸಾಬೂನು ಮಾರಾಟ ಮಾಡುತ್ತಿರುವ ಖ್ಯಾತ ನಟಿ

ಹೇಳಿಕೆಗೆ ಸ್ಪಷ್ಟನೆ ನೀಡುತ್ತ,  ಗುಂಪು ಹತ್ಯೆ ಸಮರ್ಥಕರಿಗೆ ತಿರುಗೇಟು ನೀಡಿದ ಸಾಯಿ ಪಲ್ಲವಿ

ಗುರುದ್ವಾರದಲ್ಲಿ ಸ್ಫೋಟ: ಇಬ್ಬರು ಸಾವು, ಹಲವರನ್ನು ಒತ್ತೆಯಾಳಾಗಿಸಿದ ಉಗ್ರರು

ಇತ್ತೀಚಿನ ಸುದ್ದಿ