ಮಗುವಿನ ಜೀವ ಉಳಿಸು ಎಂದು ಶಿಲುಬೆ ಮುಂದೆ ಮಲಗಿಸಿದ ತಂದೆ ತಾಯಿ!
ಬೆಳಗಾವಿ: ಮಗುವಿನ ಜೀವ ಉಳಿಸು ಎಂದು ದಂಪತಿ ತಮ್ಮ ಏಳೂವರೆ ವರ್ಷ ವಯಸ್ಸಿನ ಬಾಲಕನನ್ನು ಶಿಲುಬೆ ಎದುರು ಮಲಗಿಸಿ ಪ್ರಾರ್ಥಿಸಿದ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ.
ಪ್ಲೇಗ್ ರೋಗ ಭಾರತವನ್ನು ವಕ್ಕರಿಸಿದ್ದ ಸಂದರ್ಭದಲ್ಲಿ ಅಂದಿನ ಪಾದ್ರಿಯೊಬ್ಬರು ನಂದಗಡ ಬೆಟ್ಟದಲ್ಲಿರುವ ಶಿಲುಬೆ ಮುಂದೆ ಪ್ರಾರ್ಥನೆ ಸಲ್ಲಿಸಿ, ಬಳಿಕ ರೋಗಿಗಳ ಆರೈಕೆ ಮಾಡಿದ್ದರು. ಅವರ ಪ್ರಾರ್ಥನೆ ಫಲಿಸಿ, ಹಲವರು ಪ್ಲೇಗ್ ನಿಂದ ಗುಣಮುಖಗೊಂಡಿದ್ದರು ಎನ್ನುವ ನಂಬಿಕೆ ಇಲ್ಲಿನ ಜನರದ್ದಾಗಿದ್ದು, ಹೀಗಾಗಿ ದಂಪತಿಯು ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ತಮ್ಮ ಮಗನನ್ನು ಶಿಲುಬೆ ಮುಂದೆ ಮಲಗಿಸಿ ಪ್ರಾರ್ಥಿಸಿದ್ದಾರೆ.
ಉತ್ತರ ಕನ್ನಡ ಮೂಲದ ದಂಪತಿಯ ಏಳೂವರೆ ವರ್ಷ ವಯಸ್ಸಿನ ಶೈಲೇಶ್ ಕಳೆದ ಕೆಲವು ತಿಂಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ. ವೈದ್ಯರ ಬಳಿಗೆ ಹೋಗಿ ಪರೀಕ್ಷೆ ನಡೆಸಿದ ವೇಳೆ ಬಾಲಕನಿಗೆ ಮೆದುಳು ಜ್ವರ ಇರುವುದು ಗೊತ್ತಾಗಿದೆ. ಕೂಲಿ ಕಾರ್ಮಿಕರಾಗಿರುವ ದಂಪತಿ ಮಗುವನ್ನು ಉಳಿಸಿಕೊಳ್ಳಲು ಆಸ್ಪತ್ರೆಗಳಿಗೆ ಅಲೆದಾಡಿದ್ದು, ಆದರೆ ಬಾಲಕ ಇನ್ನು ಬದುಕುವುದಿಲ್ಲ ಎಂದು ವೈದ್ಯರು ಕೈಚೆಲ್ಲಿದ್ದಾರೆ.
ಎಲ್ಲ ನಂಬಿಕೆಗಳು ಕೈಚೆಲ್ಲಿ ಹೋದ ನಂತರ ದಂಪತಿ ಕಣ್ಣೀರು ಹಾಕುತ್ತಾ, ಶೈಲೇಶ್ ನನ್ನು ಶಿಲುಬೆ ಮುಂದೆ ಮಲಗಿಸಿ, ಅಸಹಾಯಕತೆಯಿಂದ ಪ್ರಾರ್ಥಿಸಿ, ಮಗನ ಜೀವ ಉಳಿಸುವಂತೆ ಬೇಡಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮಗುವಿನ ಜೀವ ಉಳಿಸು ಎಂದು ಶಿಲುಬೆ ಮುಂದೆ ಮಲಗಿಸಿದ ತಂದೆ ತಾಯಿ!
ವಿಶ್ವದ ಗಮನ ಸೆಳೆದ ಅತೀ ಉದ್ದ ಕಿವಿಯ ಮೇಕೆಮರಿ!
ಅಂಗನವಾಡಿ ಕಾರ್ಯಕರ್ತೆ ಸಹಿತ ಐವರ ಮಕ್ಕಳ ಮೇಲೆ ಬಿದ್ದ ಗಂಜಿ ನೀರು
ನಟ ದಿಗಂತ್ ಕುತ್ತಿಗೆಗೆ ಗಂಭೀರ ಏಟು: ಗೋವಾದಿಂದ ಬೆಂಗಳೂರಿಗೆ ಏರ್ ಲಿಫ್ಟ್
ಪ್ರಾಂಶುಪಾಲರನ್ನು ಕರೆದು ಕಪಾಳಕ್ಕೆ ಬಾರಿಸಿದ ಜೆಡಿಎಸ್ ಶಾಸಕ!: ಅನಾಗರಿಕ ವರ್ತನೆ ಕಂಡು ಅಧಿಕಾರಿಗಳು ಶಾಕ್
ಯೋಗ ವ್ಯಕ್ತಿಗಾಗಿ ಮಾತ್ರವಲ್ಲ, ವಿಶ್ವಶಾಂತಿಗಾಗಿ: ಮೈಸೂರಿನಲ್ಲಿ ಪ್ರಧಾನಿ ಮೋದಿ ಮಾತುಗಳು