ರಾಜೀನಾಮೆ ನೀಡಲು ಸಿದ್ಧ: ಉದ್ಧವ್ ಠಾಕ್ರೆ
ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡಲು ಸಿದ್ಧ ಎಂದು ಘೋಷಿಸಿದ್ದಾರೆ.
ಫೇಸ್ ಬುಕ್ ಲೈವ್ ನಲ್ಲಿ ಬಂದು ಉದ್ಧವ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಹಿಂದುತ್ವದ ಮೌಲ್ಯಗಳಿಂದ ವಿಮುಖವಾಗಿಲ್ಲ. ಹಿಂದುತ್ವ ಮತ್ತು ಶಿವಸೇನೆ ಒಂದೇ ನಾಣ್ಯದ ಎರಡು ಮುಖಗಳು. ಬಾಳಾ ಸಾಹೇಬರ ಶಿವಸೇನೆಯಿಂದ ಯಾವುದೇ ಬದಲಾವಣೆ ಇಲ್ಲ. ಇನ್ನೂ ಹಿಂದುತ್ವಕ್ಕಾಗಿ ಹೋರಾಡುತ್ತೇನೆ. ಎಲ್ಲಾ ಶಾಸಕರು ಬಾಳಾ ಸಾಹೇಬ್ ಅವರೊಂದಿಗೆ ಇದ್ದಾರೆ ಎಂದು ಉದ್ಧವ್ ಹೇಳಿದ್ದಾರೆ.
ಆಡಳಿತದಲ್ಲಿ ಅನುಭವ ಇಲ್ಲದೆ ನಾನು ಮುಖ್ಯಮಂತ್ರಿಯಾದವ, ಕೋವಿಡ್ ನಂತಹ ಅನೇಕ ಬಿಕ್ಕಟ್ಟುಗಳನ್ನು ಎದುರಿಸಿದ್ದೇನೆ. ದೇಶದ ಪ್ರಮುಖ ಐದು ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದೆ ‘ಪಕ್ಷದ ಕೆಲ ಶಾಸಕರು ನಾಪತ್ತೆಯಾಗಿದ್ದು ನಿಜ ,ಒಬ್ಬರಿಗೊಬ್ಬರು ಹೆದರುವ ಶಿವಸೇನೆ ನನಗೆ ಬೇಡ. ಬಾಳಾ ಸಾಹೇಬರು ತಮಗೆ ವಹಿಸಿದ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದರು.
ಇದೇ ವೇಳೆ ಮಹಾರಾಷ್ಟ್ರದಿಂದ ಶಿವಸೇನೆ ಇಬ್ಭಾಗದತ್ತ ಸಾಗುವ ಸೂಚನೆಗಳು ಬರುತ್ತಿದೆ. ಉಚ್ಛಾಟಿತ ಶಾಸಕರೊಂದಿಗೆ ಶಿವಸೇನೆ ನಾಯಕ ಎಂದು ಹೇಳಿಕೊಳ್ಳುವ ಏಕನಾಥ್ ಶಿಂಧೆ ಹೊರ ಬಂದು ತಮ್ಮ ಜೊತೆಗಿರುವ 34 ಶಾಸಕರ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದಾರೆ. ಈ ಶಾಸಕರು ಶಿಂಧೆ ಅವರಿಗೆ ಬೆಂಬಲ ಸೂಚಿಸಿ ರಾಜ್ಯಪಾಲರು ಮತ್ತು ಉಪಸಭಾಪತಿಗೆ ಪತ್ರ ಬರೆದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಆಪರೇಷನ್ ಕಮಲ ಬಾಂಬ್: ಉದ್ಧವ್ ಠಾಕ್ರೆ ಸರ್ಕಾರ ಪತನಕ್ಕೆ ಡೆಡ್ ಲೈನ್
ಪ್ರಕೃತಿಯ ಕುತೂಹಲಕಾರಿ ಜೀವಿಗಳ ಅದ್ಭುತ ನೋಟ: ದೈತ್ಯ ಜೀವಿಗಳ ಅಚ್ಚರಿಯ ಸಂಗತಿ
ಸಮುದ್ರದಲ್ಲಿ ಮುಳುಗಿ ಹೋದ ಪ್ರಸಿದ್ಧ ತೇಲುವ ರೆಸ್ಟೋರೆಂಟ್!