ಮಂಗಳೂರಿನ ಸಮುದ್ರದಲ್ಲಿ ಮುಳುಗಡೆಯಾದ ಚೀನಾದ ಹಡಗು! - Mahanayaka
10:23 AM Thursday 12 - December 2024

ಮಂಗಳೂರಿನ ಸಮುದ್ರದಲ್ಲಿ ಮುಳುಗಡೆಯಾದ ಚೀನಾದ ಹಡಗು!

ship
27/06/2022

ಮಂಗಳೂರು:  ನಗರದ ಹೊರವಲಯ ಉಳ್ಳಾಲ ತೀರದ ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾಗುತ್ತಿರುವ ಚೀನಾ ಮೂಲದ ಪ್ರಿನ್ಸೆಸ್ ಮಿರಾಲ್ ಹಡಗು, ಕಡಲಿನ ಒಡಲಿಗೆ ಮುಲುಗುವ ಮುನ್ನ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸರಕು ಹೇರಿಕೊಂಡಿರುವ ಈ ಹಡಗು ಟಿಯಾಂಜಿನ್‌ ನಿಂದ ಲೆಬೆನಾನ್‌  ಗೆ ತೆರಳುತ್ತಿದ್ದು, ಅಸಲಿಗೆ ಸಮುದ್ರ ಮಧ್ಯೆ ಸಂಚರಿಸಬೇಕಿದ್ದ ಈ ಹಡಗು ಮಂಗಳೂರಿಗೆ ಆಗಮಿಸಿರುವುದು ಯಾಕೆ ಎಂಬ ಅನುಮಾನ ಕಾಡುತ್ತಿದ್ದು, ಈ ಬಗ್ಗೆ ಕೇಂದ್ರ ತನಿಖಾ ತಂಡ ತನಿಖೆ ನಡೆಸುವ ಸಾಧ್ಯತೆ ದಟ್ಟವಾಗುತ್ತಿದೆ.

ಹಡಗು ಸಮುದ್ರ ಮಧ್ಯ ಸಂಚರಿಸುವ ಬದಲು ಉಳ್ಳಾಲ ಸಮುದ್ರ ತೀರಕ್ಕೆ ಆಗಮಿಸಿ ಅಪಾಯಕ್ಕೀಡಾಗಿತ್ತು. ಸದ್ಯಕ್ಕೆ ಈ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಸರಕು ನೌಕೆ ಪ್ರಿನ್ಸೆಸ್ ಮಿರಾಲ್ ಸಮುದ್ರ ತೀರದಲ್ಲಿ ಮುಳುಗಿರುವುದರಿಂದ ಅದರಲ್ಲಿರುವ 220 ಮೆಟ್ರಿಕ್ ಟನ್ ತೈಲ ಸೋರಿಕೆ ಭೀತಿ ಆವರಿಸಿದೆ. ಹಡಗಿನಿಂದ ರಕ್ಷಿಸಲ್ಪಟ್ಟಿರುವ 15 ಮಂದಿ ಸಿರಿಯನ್ ಪ್ರಜೆಗಳನ್ನು ನವಮಂಗಳೂರು ಬಂದರು ಗೆಸ್ಟ್‌ ಹೌಸ್‌ ನಲ್ಲಿ ಇರಿಸಲಾಗಿದೆ.

ಸದ್ಯ ಬೆಂಗಳೂರಿನ ವಿದೇಶೀಯರ ಆಸರೆ ಕೇಂದ್ರ ಭರ್ತಿಯಾದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಬಳಿಯ ಇನ್ನೊಂದು ಕೇಂದ್ರಕ್ಕೆ ಇವರೆಲ್ಲರನ್ನು ಸ್ಥಳಾಂತರಿಸುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ತಾಯಿ ಮಗಳ ಮೇಲೆ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ: ಕೃತ್ಯದ ಬಳಿಕ ಕಾಲುವೆಗೆ ಎಸೆದ ಪಾಪಿಗಳು

ಮದುವೆ ನಡೆದು ಕೆಲವೇ ಗಂಟೆಗಳಲ್ಲಿ ವರ ಸಾವು!

ಬಾಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ: ಮದ್ರಸ ಶಿ‍ಕ್ಷಕ ಅರೆಸ್ಟ್

ಫ್ಯಾಶನ್ ಬ್ಲಾಗರ್ ಳನ್ನು ಕೈಕಾಲು ಕಟ್ಟಿ ಕಟ್ಟಡದಿಂದ ಕೆಳಗೆಸೆದ ಪತಿ!

ನಡು ರಸ್ತೆಯಲ್ಲಿ ವಿದ್ಯಾರ್ಥಿನಿಯ ಶಿರಚ್ಛೇದಿಸಿದ ಪಾಗಲ್ ಪ್ರೇಮಿ: ಮದುವೆಗೆ ಒಪ್ಪದಿದ್ದರೆ ಕೊಲ್ಲುವುದೇ?

 

ಇತ್ತೀಚಿನ ಸುದ್ದಿ