ಕೆಜಿಎಫ್ ಹೆಸರಿನಲ್ಲಿ ಇಕ್ಕಟ್ಟಿಗೆ ಸಿಲುಕಿಸುವ ಪತ್ರಕರ್ತರ ಪ್ರಶ್ನೆಗೆ ಜಾಣತನದ ಉತ್ತರ ನೀಡಿದ ಕಿಚ್ಚ ಸುದೀಪ್!
ಕಿಚ್ಚ ಸುದೀಪ್ ಅವರ ನಟನೆಯ ವಿಕ್ರಾಂತ್ ರೋಣ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇದೇ ವೇಳೆ ಚಿತ್ರದ ಪ್ರಚಾರದಲ್ಲಿ ತೊಡಗಿರುವ ಕಿಚ್ಚ ಸುದೀಪ್ ಅವರು ತಮಿಳುನಾಡಿನ ಪತ್ರಕರ್ತರೊಬ್ಬರು ಕೇಳಿದ ಇಕ್ಕಟ್ಟಿನ ಪ್ರಶ್ನೆಗೆ ಜಾಣತನದಿಂದ ಉತ್ತರಿಸಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆಜಿಎಫ್ 1 ಮತ್ತು 2 ಬಂದ ಮೇಲೆ ಕನ್ನಡ ಚಿತ್ರರಂಗ ಫೇಮಸ್ ಆಯಿತು. ಇದರ ಬಗ್ಗೆ ನೀವು ಏನು ಹೇಳುತ್ತೀರಿ ಎಂದು ಪತ್ರಕರ್ತರೊಬ್ಬರು ಇಕ್ಕಟ್ಟಿಗೆ ಸಿಲುಕಿಸುವ ಪ್ರಶ್ನೆ ಕೇಳಿದರು. ಈ ಪ್ರಶ್ನೆಗೆ ಅಷ್ಟೆ ನಯವಾಗಿ ಉತ್ತರಿಸಿದ ಸುದೀಪ್, ದೇವಸ್ಥಾನದ ಕಥೆ ಹೇಳುವ ಮೂಲಕ ಸ್ಯಾಂಡಲ್ ವುಡ್ ನ ಘನತೆ ಎತ್ತಿ ಹಿಡಿದಿದ್ದಾರೆ.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ದೇವಸ್ಥಾನ ಇರುತ್ತೆ ಅಂದುಕೊಳ್ಳಿ, ಅಲ್ಲಿಗೆ ನನ್ನ ಸ್ನೇಹಿತ ಹೋಗಿ ಬರುತ್ತಾರೆ. ಆಗ ಅವರು ಅಂದುಕೊಂಡ ಕೆಲಸ ಆಗುತ್ತೆ. ಅವರು ಬಂದು ಹೀಗೆ ಆಯ್ತು ಅಂತ ಹೇಳುತ್ತಾರೆ. ಅವರು ಹೇಳಿದ ಮಾತ್ರಕ್ಕೆ ದೇವರು ಆಗ ಮಾತ್ರ ಇಲ್ಲ. ದೇವಸ್ಥಾನದಲ್ಲಿ ಮೊದಲಿನಿಂದಲೂ ದೇವರು ಇರುತ್ತಾರೆ. ನಿಮಗೆ ಒಳ್ಳೆದಾಗಿದೆ ಅಂತ ಈಗ ದೇವರು ಇದ್ದಾರೆ ಎಂದು ಹೇಳೋಕೆ ಆಗುತ್ತಾ? ಎಂದು ಪ್ರಶ್ನಿಸಿದರು.
ಕನ್ನಡ ಚಿತ್ರರಂಗಕ್ಕೆ ಮೊದಲಿನಿಂದಲೂ ಹೆಸರು ಇದೆ. ಕೆಲವೊಂದು ಸಿನಿಮಾಗಳಿಂದ ಅದರ ಮಹತ್ವ ಬೇರೆಯವರಿಗೆ ಗೊತ್ತಾಗಿದೆ ಎಂದು ಜಾಣತನದ ಉತ್ತರ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಹಾಡಹಗಲೇ ಮಹಿಳೆಯನ್ನು ಇರಿದು ಬರ್ಬರ ಹತ್ಯೆ!
ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್: ವಿದ್ಯುತ್ ಬೆಲೆ ಏರಿಕೆ!
21 ವರ್ಷ ಜೊತೆಗಿದ್ದ ಎರಡನೇ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪಾಪಿ!
ಶಾಲೆಗಳಿಗೆ ರಜೆ, ಪೆಟ್ರೋಲ್ ಗಾಗಿ ಕಾದು ಕುಳಿತ ಜನರು: ಶ್ರೀಲಂಕಾದ ದುಸ್ಥಿತಿ!
ಅಂಬೇಡ್ಕರ್ ಸಮಾಜ ಸೇವಾ ಸಂಘದಿಂದ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಪ್ರೋತ್ಸಾಹ ಧನ