ಕೊನೆಯ ಕ್ಷಣದಲ್ಲೂ ಅಂಗಾಂಗ ದಾನಿಗಳು ಸಿಗಲಿಲ್ಲ: ಖ್ಯಾತ ನಟಿಯ ಪತಿ ನಿಧನ - Mahanayaka
8:05 AM Thursday 12 - December 2024

ಕೊನೆಯ ಕ್ಷಣದಲ್ಲೂ ಅಂಗಾಂಗ ದಾನಿಗಳು ಸಿಗಲಿಲ್ಲ: ಖ್ಯಾತ ನಟಿಯ ಪತಿ ನಿಧನ

vidyasagar passes away
29/06/2022

ಚೆನ್ನೈ:  ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ವಿದ್ಯಾಸಾಗರ್ ಅವರು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು. ಕೊನೆಯ ಕ್ಷಣದಲ್ಲಿ ಸೋಂಕು ಉಲ್ಬಣಗೊಂಡಿದ್ದು, ಅಂಗಾಂಗ ಕಸಿ ಮಾಡಲು ವೈದ್ಯರು ಶಿಫಾರಸು ಮಾಡಿದ್ದರು. ಆದರೆ, ಅಂಗಾಂಗ ದಾನಿಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆ ಸಾಧ್ಯವಾಗಲಿಲ್ಲ. ವೆಂಟಿಲೇಟರ್ ಸಹಾಯದಿಂದ ಅವರು ಉಸಿರಾಡುತ್ತಿದ್ದರು. ನಿನ್ನೆ ಸಂಜೆಯ ವೇಳೆಗೆ ಅವರ ಸ್ಥಿತಿ ಹದಗೆಟ್ಟು ಸಾವಿಗೆ ಸಮೀಪಿಸಿದ್ದರು. ಕೊನೆಗೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ವಿದ್ಯಾಸಾಗರ್ ಅವರ ನಿಧನದ ಸುದ್ದಿಯನ್ನು ನಟ ಶರತ್ ಕುಮಾರ್ ಅವರು ಟ್ವೀಟ್ ಮಾಡಿದ್ದು, ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಅಕಾಲಿಕ ನಿಧನದ ಸುದ್ದಿ ಆಘಾತಕಾರಿಯಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಸಂತಾಪ ಸೂಚಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬ್ರಾಹ್ಮಣರ ಬಗ್ಗೆ ಹಗುರವಾಗಿ ಮಾತನಾಡಿದರೆ ಹುಷಾರ್… | ಬ್ರಾಹ್ಮಣ ಮುಖಂಡರಿಂದ ಎಚ್ಚರಿಕೆ

ಕೆಜಿಎಫ್ ಹೆಸರಿನಲ್ಲಿ ಇಕ್ಕಟ್ಟಿಗೆ ಸಿಲುಕಿಸುವ ಪತ್ರಕರ್ತರ ಪ್ರಶ್ನೆಗೆ ಜಾಣತನದ ಉತ್ತರ ನೀಡಿದ ಕಿಚ್ಚ ಸುದೀಪ್!

ಹಾಡಹಗಲೇ ಮಹಿಳೆಯನ್ನು ಇರಿದು ಬರ್ಬರ ಹತ್ಯೆ!

ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಾಯಿ!

ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್: ವಿದ್ಯುತ್ ಬೆಲೆ ಏರಿಕೆ!

ಇತ್ತೀಚಿನ ಸುದ್ದಿ