ರಿಲಯನ್ಸ್ ಜಿಯೋ ಅಧ್ಯಕ್ಷ ಸ್ಥಾನಕ್ಕೆ ಮುಕೇಶ್ ಅಂಬಾನಿ ರಾಜೀನಾಮೆ
ರಿಲಯನ್ಸ್ ಜಿಯೋ ಅಧ್ಯಕ್ಷ ಸ್ಥಾನಕ್ಕೆ ಮುಕೇಶ್ ಅಂಬಾನಿ ರಾಜೀನಾಮೆ ನೀಡಿದ್ದು, ಅವರ ಪುತ್ರ ಆಕಾಶ್ ಅಂಬಾನಿ ನೂತನ ಅಧ್ಯಕ್ಷರಾಗಿದ್ದಾರೆ.
ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಂಪನಿಯ ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿ ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಕಾಶ್ ಎಂ.ಅಂಬಾನಿ ನೇಮಕಗೊಂಡಿದ್ದಾರೆ. ಮುಖೇಶ್ ಅಂಬಾನಿ ಸೋಮವಾರ ಅಧಿಕೃತವಾಗಿ ತಮ್ಮ ಸ್ಥಾನವನ್ನು ತೆರವು ಮಾಡಿದ್ದಾರೆ.
ಪಂಕಜ್ ಮೋಹನ್ ಪವಾರ್ ಅವರನ್ನು ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು ರಮೀಂದರ್ ಸಿಂಗ್ ಗುಜ್ರಾಲ್ ಮತ್ತು ಕೆವಿ ಚೌಧರಿ ಅವರನ್ನು ಸ್ವತಂತ್ರ ನಿರ್ದೇಶಕರಾಗಿ ನೇಮಿಸಲಾಗಿದೆ. ಇವರ ಅಧಿಕಾರದ ಅವಧಿ ಐದು ವರ್ಷಗಳು. ಟೆಲಿಕಾಂ ಕಂಪನಿಗಳು 5G ನೆಟ್ ವರ್ಕ್‌ಗಳನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿರುವ ವೇಳೆ ಆಕಾಶ್ ಅಂಬಾನಿ ರಿಲಯನ್ಸ್ ಜಿಯೋವನ್ನು ಮುನ್ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಜುಲೈನಲ್ಲಿ 5ಜಿ ತರಂಗಾಂತರದ ಹರಾಜು ನಡೆಸಲಿದೆ.
ಈ ಹಿಂದೆ ಮುಖೇಶ್ ಅಂಬಾನಿ ನೇತೃತ್ವದಲ್ಲಿ ರಿಲಯನ್ಸ್ ಜಿಯೋ ಡಿಜಿಟಲ್ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿತ್ತು.
ರಿಲಯನ್ಸ್ ಜಿಯೋ ಇನ್ಫೋಕಾಮ್ ಸೇರಿದಂತೆ ಎಲ್ಲಾ ಜಿಯೋ ಡಿಜಿಟಲ್ ಸೇವಾ ಬ್ರ್ಯಾಂಡ್ ಗಳನ್ನು ಹೊಂದಿರುವ ಜಿಯೋ ಪ್ಲಾಟ್ ಫಾರ್ಮ್ಸ್ ಲಿಮಿಟೆ ಡ್‌ನ ಅಧ್ಯಕ್ಷರಾಗಿ ಮುಖೇಶ್ ಅಂಬಾನಿ ಮುಂದುವರಿಯಲಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮನೆ ಮಾಲಿಕ ಸುಖ ನಿದ್ದೆಯಲ್ಲಿದ್ದ: ಹಸಿದು ಬಂದ ಆನೆ ಗೋಡೆಯನ್ನೇ ಒಡೆದು ಹಾಕಿತು!
ವಿದ್ಯಾರ್ಥಿನಿಯರ ತಾಯಂದಿರಿಗೆ ಅಶ್ಲೀಲ ಸಂದೇಶ ರವಾನಿಸಿದ ಶಿಕ್ಷಕ ಅಮಾನತು!
ಗೂಳಿ ಕಾಳಗದ ವೇಳೆ ನಾಲ್ವರು ಸಾವು: ಕನಿಷ್ಠ 300 ಮಂದಿ ಗಾಯ
ಕೈಗಳನ್ನು ಕಟ್ಟಿಕೊಂಡು 780 ಮೀಟರ್ ಅಗಲದ ನದಿಯನ್ನು ಈಜಿ ದಾಟಿದ ವೃದ್ಧೆ!
ಹೀನಾಯ ಸೋಲಿನ ನಂತರ ಒಟಿಟಿಗೆ ಕಾಲಿಟ್ಟ ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’!