ಗ್ರಾಹಕರ ವೇಷದಲ್ಲಿ ಬಂದು ಕತ್ತು ಕೊಯ್ದರು: ಬೆಚ್ಚಿಬೀಳಿಸಿದ ಟೈಲರ್ ಹತ್ಯೆಯ ವಿಡಿಯೋ - Mahanayaka
10:48 AM Thursday 14 - November 2024

ಗ್ರಾಹಕರ ವೇಷದಲ್ಲಿ ಬಂದು ಕತ್ತು ಕೊಯ್ದರು: ಬೆಚ್ಚಿಬೀಳಿಸಿದ ಟೈಲರ್ ಹತ್ಯೆಯ ವಿಡಿಯೋ

kanhaiya lal
29/06/2022

ರಾಜಸ್ಥಾನ: ಉದಯಪುರದಲ್ಲಿ ನಿನ್ನೆ ನಡೆದ ಭೀಕರ ಹತ್ಯೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಟೈಲರ್ ನ ಹತ್ಯೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಹತ್ಯೆಗೆ ವ್ಯಾಪಕ ಖಂಡನೆ ಕೂಡ ವ್ಯಕ್ತವಾಗಿದೆ.

ನೂಪುರ್​ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಟೈಲರ್ ಕನ್ಹಯ್ಯ ಲಾಲ್​ ನನ್ನು ಗ್ರಾಹಕರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಸ್ವಲ್ಪವೂ ಕರುಣೆ ತೋರದೇ ಭೀಕರವಾಗಿ ಹತ್ಯೆಗೈದಿದ್ದಾರೆ. ಹತ್ಯೆ ನಡೆಸಿದರೂ ತೃಪ್ತರಾಗದ ಪಾಪಿಗಳು ಶಿರಚ್ಛೇದನ ಮಾಡುವ ಮೂಲಕ ವಿಕೃತಿ ಮೆರೆದಿದ್ದಾರೆ.

ಕನ್ಹಯ್ಯ ಲಾಲ್ ಏಕಾಂಗಿಯಾಗಿದ್ದ ವೇಳೆಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿಗಳು, ಮೊದಲು ತಮ್ಮ ಅಳತೆ ನೀಡುವ ನೆಪದಲ್ಲಿ ಕನ್ಹಯ್ಯ ಲಾಲ್ ನ ಗಮನ ಬೇರೆಡೆಗೆ ಸೆಳೆದಿದ್ದಾರೆ. ದುಷ್ಕರ್ಮಿಗಳ ಉದ್ದೇಶ ತಿಳಿಯದ ಕನ್ಹಯ್ಯ ಲಾಲ್, ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಮೊದಲು ಏಕಾಏಕಿ ಕುತ್ತಿಗೆಯ ಹಿಂಭಾಗಕ್ಕೆ ದುಷ್ಕರ್ಮಿಗಳು ಇರಿದಿದ್ದಾರೆ.  ಬಳಿಕ ಮಾರಕಾಸ್ತ್ರಗಳಿಂದ ಅಮಾನವೀಯವಾಗಿ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಕೊಲೆಡುಕರಿಗೆ ಭಯೋತ್ಪಾದಕ ಸಂಘಟನೆಯ ಸಂಪರ್ಕ ಇರುವುದರಿಂದ ರುಂಡ ಬೇರ್ಪಡಿಸಿ ಹತ್ಯೆ ಮಾಡಿದ್ದನ್ನೂ ಭಯೋತ್ಪಾದನೆ ಎಂದೇ ಪರಿಗಣಿಸಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಬಂಧಿತರಾಗಿರುವ ಇಬ್ಬರು ಆರೋಪಿಗಳ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಪಾಕಿಸ್ತಾನದ ಲಿಂಕ್ ಇರುವ ನಿಟ್ಟಿನಲ್ಲಿಯೇ ತನಿಖೆ ನಡೆಸಲಾಗುತ್ತಿದೆ ಎಂದು ರಾಜಸ್ಥಾನ ಡಿಜಿಪಿ ಮೋಹನ್ ಲಾಲ್ ತಿಳಿಸಿದ್ದಾರೆ.




ಉದಯಪುರದಲ್ಲಿ ನಡೆದ ಹತ್ಯೆ ಪ್ರಕರಣದ ಜವಾಬ್ದಾರಿಯನ್ನು ಎನ್ ಐ ಎ ಗೆ ವಹಿಸಲಾಗಿದೆ. ಬಂಧಿತ ಮುಹಮ್ಮದ್ ಗೌಸ್ ಹಾಗೂ ಮುಹಮ್ಮದ್ ರಿಯಾಜ್ ಅಟ್ಟಾರಿ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಿಸಲಾಗಿದೆ. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರಕರಣವಾಗಿದೆ. ಆರೋಪಿಗಳಿಗೆ ಪಾಕಿಸ್ತಾನದ ಜತೆ ಸಂಪರ್ಕವಿದೆ ಎಂಬ ಬಗ್ಗೆ ಮಾಹಿತಿ ಇದೆ. ಇದು ಭಯೋತ್ಪದಕ ಕೃತ್ಯ ಎಂದೇ ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಘಟನೆಗೆ ಸಂಬಂಧಿಸಿದಂತೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಎಂಬುವವರನ್ನು ಇಬ್ಬರು ದುಷ್ಕರ್ಮಿಗಳು ಮಂಗಳವಾರ ಕತ್ತು ಸೀಳಿ ಹತ್ಯೆ ಮಾಡಿರುವುದನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಂಡಿಸಿದ್ದು, ಹಿಂಸಾಚಾರ ಮತ್ತು ಉಗ್ರವಾದವನ್ನು ಒಪ್ಪಲಾಗದು ಎಂದು ಅವರು ಹೇಳಿದ್ದಾರೆ. ಉದಯಪುರದಲ್ಲಿ ನಡೆದ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಕಾನೂನು ಕ್ರಮ ಕೈಗೊಳ್ಳಲಿದೆ. ಎಲ್ಲರೂ ಶಾಂತಿ ಕಾಪಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಉದಯಪುರದಲ್ಲಿ ನಡೆದಿರುವ ಟೈಲರ್ ಹತ್ಯೆ ಪ್ರಕರಣದ ಆರೋಪಿಗಳಿಗೆ ವಿದೇಶಿ ನಂಟಿರುವುದು ದೃಢಪಟ್ಟಿದೆ. ಕನ್ಹಯ್ಯ ಲಾಲ್ ಹತ್ಯೆಯ ಹಿಂದೆ ಸಮಾಜದಲ್ಲಿ ಭಯ ಸೃಷ್ಟಿಸುವ ಉದ್ದೇಶವಿರುವುದು ಖಚಿತವಾಗಿದೆ. ಹಂತಕರು ವಿದೇಶಿ ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ರಾಜಸ್ಥಾನ ಸಿಎಂ  ಅಶೋಕ್ ಗೆಹಲೋತ್ ತಿಳಿಸಿದ್ದಾರೆ.

ಉದಯಪುರದಲ್ಲಿ ನಡೆದ ಭಯಾನಕ ಘಟನೆ ನನ್ನನ್ನು ಬೆಚ್ಚಿಬೀಳಿಸಿದೆ ಎಂದು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ಖಂಡಿಸಿದ್ದು, ಯಾವುದೇ ಸುಸಂಸ್ಕೃತ ಸಮಾಜದಲ್ಲಿ ನಡೆಯಬಾರದ ಘೋರ ಅಪರಾಧವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅಪರಾಧ ಎಸಗಿದವರ ವಿರುದ್ಧ ಕಠಿಣ ಮತ್ತು ಶೀಘ್ರ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.

ಇನ್ನೂ ಘಟನೆಗೆ ರಾಜ್ಯದಲ್ಲೂ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ರಾಜಸ್ಥಾನದ ಕನ್ಹಯ್ಯ ಲಾಲ್ ಹತ್ಯೆಯನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸಲೇಬೇಕು. ಧರ್ಮಾಂಧತೆಯ ಅಮಲು ತಲೆಗೇರಿಸಿಕೊಂಡಿರುವ ರಕ್ತಪಿಪಾಸಿಗಳು ಮಾತ್ರ ಇಂತಹ ಹೇಯ ಕೃತ್ಯ ನಡೆಸಲು ಸಾಧ್ಯ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಇಬ್ಬರು ಕಿರಾತಕರರು ಮಾಡಿರುವ ಕೃತ್ಯ ಯಾವ ಭಯೋತ್ಪಾದಕ ಕೃತ್ಯಕ್ಕೂ ಕಡಿಮೆಯಿಲ್ಲ. ಬಿಜೆಪಿ ಪ್ರತಿ ಹತ್ಯೆಯಲ್ಲೂ ಹೆಣದ ರಾಜಕೀಯ ಮಾಡುತ್ತಿರುವ ಉದ್ದೇಶವೇನು.?  ಎಂದು ಇದೇ ವೇಳೆ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ರಾಜಸ್ತಾನದಲ್ಲಿ ನಡೆದ ಹಿಂದೂ ಟೈಲರ್ ಹತ್ಯೆ ನಾಚಿಗೆಗೇಡು. ಇದೊಂದು ವ್ಯವಸ್ಥಿತ ಸಂಚು, ದೇಶದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆ ಶುರುವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಇದೇ ಮಾದರಿಯಲ್ಲಿ ಶಿವಮೊಗ್ಗದಲ್ಲೂ ಹರ್ಷನ ಹತ್ಯೆ ನಡೆದಿತ್ತು. ಹರ್ಷನ ಕತ್ತು ಸಿಗಿದು ಹತ್ಯೆ ಮಾಡಿ ಅದರ ವಿಡಿಯೋ ತಂಗಿಗೆ ಕಳುಹಿಸಲಾಗಿತ್ತು. ರಾಜಸ್ಥಾನ ಘಟನೆ ಮತ್ತು ಗಲಭೆಯ ಹಿಂದೆ ವಿದೇಶಿ ಕೈವಾಡವಿದೆ. ಅಲ್ಲಿನ ಸರ್ಕಾರದ ಪುಷ್ಟೀಕರಣ ನೀತಿಯ ಕಾರಣದಿಂದ ಈ ಘಟನೆ ಆಗಿದೆ ಎಂದರು. ಕಾಂಗ್ರೆಸ್ ಈಗ ಮೌನವಾಗಿರುವ ಹಿನ್ನೆಲೆ ಏನು..? ಇಂತಹ ದುಷ್ಕೃತ್ಯ ನಡೆದಾಗ ಕಾಂಗ್ರೆಸ್ ಯಾರ ಪರವಾಗಿರುತ್ತದೆ ಎನ್ನುವುದು ಮುಖ್ಯ ಎಂದರು.

ಉದಯಪುರದಲ್ಲಿ ಟೈಲರ್ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಇಂತಹ ಪೈಶಾಚಿಕ ಕೃತ್ಯವೆಸಗುವವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಕಾಂಗ್ರೆಸ್ ಸರ್ಕಾರ ಮತಾಂಧ ಶಕ್ತಿಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಆ ವ್ಯಕ್ತಿಗಳನ್ನು ರಾಜ್ಯದಲ್ಲಿ ಬೆಳೆಯಲು ಬಿಟ್ಟಿದೆ. ಟೈಲರ್ ಹತ್ಯೆ ಬಗ್ಗೆ ರಾಜಸ್ಥಾನ ಸರ್ಕಾರ ಉತ್ತರ ಕೊಡಬೇಕು ಎಂದು ಅವರು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೊಲೆಗಡುಕ ಮುಸಲ್ಮಾನರಿಗೆ ಶಿಕ್ಷೆ ನೀಡಲು ಕಾನೂನು ತಿದ್ದುಪಡಿ ಮಾಡಬೇಕು: ಮಾಜಿ ಸಚಿವ ಈಶ್ವರಪ್ಪ

ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಹಾಕಿದ ಟೈಲರ್ ನ ಬರ್ಬರ ಹತ್ಯೆ!

ನಟಿ ಪವಿತ್ರ ಲೋಕೇಶ್ 3ನೇ ಮದುವೆಯ ವದಂತಿ: ಕಾನೂನು ಸಮರಕ್ಕೆ ಮುಂದಾದ ನಟಿ

ಇತ್ತೀಚಿನ ಸುದ್ದಿ