ಹೊಟೇಲ್ ನಲ್ಲಿ ಜೊತೆಗಿದ್ದ ನರೇಶ್, ಪವಿತ್ರಾ ಲೋಕೇಶ್ ಮೇಲೆ ನರೇಶ್ ಪತ್ನಿಯಿಂದ ಹಲ್ಲೆಗೆ ಯತ್ನ! - Mahanayaka
12:31 PM Wednesday 5 - February 2025

ಹೊಟೇಲ್ ನಲ್ಲಿ ಜೊತೆಗಿದ್ದ ನರೇಶ್, ಪವಿತ್ರಾ ಲೋಕೇಶ್ ಮೇಲೆ ನರೇಶ್ ಪತ್ನಿಯಿಂದ ಹಲ್ಲೆಗೆ ಯತ್ನ!

naresh pavithra lokesh
03/07/2022

ಮೈಸೂರು: ಟಾಲಿವುಡ್ ನಟ ನರೇಶ್, ನಟಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಪತ್ನಿ ರಮ್ಯಾ ರಘುಪತಿ ಸಂಘರ್ಷ ದಿನದಿಂದ ದಿನಕ್ಕೆ ಕಾವೇರುತ್ತಿದ್ದು,  ಇಂದು ನರೇಶ್ ಹಾಗೂ ಪವಿತ್ರಾ ಇದ್ದ ಹೊಟೇಲ್ ಮುಂದೆ ಹೈಡ್ರಾಮಾ ನಡೆದಿದೆ.

ವರದಿಗಳ ಪ್ರಕಾರ, ಹುಣಸೂರು ರಸ್ತೆಯ ಹೊಟೇಲ್ ವೊಂದರಲ್ಲಿ ಪವಿತ್ರ ಲೋಕೇಶ್ ಹಾಗೂ ನರೇಶ್ ತಂಗಿದ್ದರು. ಈ ಮಾಹಿತಿ ತಿಳಿದ ನರೇಶ್ ಪತ್ನಿ ರಮ್ಯಾ ರೂಮ್ ಬಳಿ ಕಾದು ಕುಳಿತಿದ್ದು, ಪವಿತ್ರ ಲೋಕೇಶ್, ನರೇಶ್ ಹೊಟೇಲ್ ನಿಂದ ಹೊರ ಬರುತ್ತಿದ್ದಂತೆಯೇ ಚಪ್ಪಲಿಯಲ್ಲಿ ಹಲ್ಲೆ ನಡೆಸಲು ಯತ್ನಿಸಿದ್ದು, ಈ ವೇಳೆ ರಮ್ಯಾ ಅವರನ್ನು ಪೊಲೀಸರು ತಡೆದಿದ್ದಾರೆ.

ಈ ವೇಳೆ ಪವಿತ್ರಾ ಲೋಕೇಶ್ ಹಾಗೂ ನರೇಶ್ ಗೆ ರಮ್ಯಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ನರೇಶ್, ನೀನು ವಂಚಕಿ, ಮೋಸಗಾತಿ ಎಂದು ಕಿರುಚಾಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಲೈಂಗಿಕ ಕಿರುಕುಳ ಪ್ರಕರಣ:  ಮಾಜಿ ಶಾಸಕ ಪಿ.ಸಿ.ಜಾರ್ಜ್ ಬಂಧನ

ತಾಯಿಗೆ ಕರೆ ಮಾಡಿ ಕಿರುಕುಳ ನೀಡಿದವನಿಗೆ ಚಾಕುವಿನಿಂದ ಇರಿದ ಸಹೋದರರು!

ಮಾನವರಹಿತ ವಿಮಾನವನ್ನು ಯಶಸ್ವಿಯಾಗಿ ಹಾರಿಸಿದ ಭಾರತ

ಅನಾರೋಗ್ಯದಿಂದ ಬೇಸತ್ತು ಪುಟ್ಟ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಹಿಳೆ

ಆಟೋರಿಕ್ಷಾ ವಿದ್ಯುತ್ ಕಂಬಕ್ಕೆ ಡಿಕ್ಕಿ;  ಎಂಟು ಮಂದಿ ಸಾವು

ಇತ್ತೀಚಿನ ಸುದ್ದಿ