ಸಮಾಜ ಸೇವೆಗೂ ಸೈ, ಸಂಘಟನೆಗೂ ಸೈ: ಹಾಸನದ ಬಿಜೆಪಿ ಮುಖಂಡ ವೇಣು ಎಂಬ ಅಪರೂಪದ ವ್ಯಕ್ತಿ
ಹಾಸನ: ಯುದ್ಧ ಕಲಿಗಳು (Once a soldier always a soldier) ಕಾರ್ಯಕ್ರಮವು ಶಾಸಕ ಪ್ರೀತಂ ಜೆ. ಗೌಡ ಅವರ ನೇತೃತ್ವದಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನಿವೃತ್ತ ವೀರ ಯೋಧರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವೂ ನಡೆಯಿತು. ಈ ಕಾರ್ಯಕ್ರಮಕ್ಕೆ ಹಾಸನದ ಸಮಾಜ ಸೇವಕ ವೇಣು ಅವರು ಕೈ ಜೋಡಿಸಿದ್ದು, ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.
ಹಾಸನದಲ್ಲಿ ಸಮಾಜ ಮುಖಿ ಕೆಲಸ ಮಾಡುತ್ತಿರುವ ಬಡವರ ಕಷ್ಟಕ್ಕೆ ಪ್ರೀತಿಯಿಂದ ಸ್ಪಂದಿಸುವ ಮೂಲಕ ಬಿಜೆಪಿ ಪಕ್ಷ ಜನರಿಗೆ ಹತ್ತಿರವಾಗಲು ವೇಣು ಅವರು ಶ್ರಮಿಸಿದ್ದಾರೆ. ಜಾತಿ, ಧರ್ಮ, ಮತ ಇವೆಲ್ಲವನ್ನೂ ಮೀರಿ ಯಾರೇ ಸಹಾಯ ಕೇಳಿದರೂ, ಅವರ ಜಾತಿ ಧರ್ಮ ನೋಡದೇ ನೆರವಿಗೆ ಧಾವಿಸುವ ವೇಣು ಅವರು ಎಲ್ಲಾ ಬಿಜೆಪಿ ಮುಖಂಡರಿಗೆ ಮಾದರಿಯಾಗಿದ್ದಾರೆ ಎಂದು ಹಾಸನದ ಯುವ ಮುಖಂಡ ಸಚಿನ್ ಸರಗೂರು ತಿಳಿಸಿದ್ದಾರೆ.
ಆರೆಸ್ಸೆಸ್ ಕಾರ್ಯಕರ್ತನಾಗಿ ನ್ಯಾಯ, ನಿಷ್ಠೆ, ಪ್ರೀತಿಗೆ ಹೆಚ್ಚು ಒಲವನ್ನು ನೀಡುವ ಇವರು, ಬಿಜೆಪಿ ಪಕ್ಷದಿಂದ ಅತಿ ಹೆಚ್ಚು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡಿ, ಜನರಿಗೆ ಅರಿವು ತಿಳಿವಳಿಕೆ ನೀಡುವ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಅವರು ಸಾರ್ವಜನಿಕ ವೇದಿಕೆಗಳಲ್ಲಿ ಮಾತುಗಳು ಜನರ ಹೃದಯವನ್ನು ತಟ್ಟುವಂತಿರುತ್ತದೆ. ಅವರಾಡಿದ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತಾರೆ ಎಂದು ಸಚಿನ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಅದ್ಭುತ ಭಾಷಣಗಾರ ಮಾತ್ರವಲ್ಲ, ಒಬ್ಬ ಅತ್ಯುತ್ತಮ ಸಂಘಟನಾಕಾರನೂ ಹೌದು. ಯುವಕರನ್ನು ಪ್ರೋತ್ಸಾಹಿಸಿ ಬೆಳೆಸುವ ಗುಣ ಎಲ್ಲರಿಗೂ ಮಾದರಿಯಾದದ್ದು, ಹೃದಯವಂತಿಕೆಯ ಜೊತೆಗೆ ಭಾವನಾತ್ಮಕ ಜೀವಿಯೂ ಹೌದು. ವೇಣು ಅವರು ತಾನೊಬ್ಬನೇ ಬೆಳೆಯ ಬೇಕು ಎನ್ನುವ ಸ್ವಾರ್ಥವನ್ನು ತೋರದೇ ತನ್ನ ಜೊತೆಗೆ ಕಾರ್ಯಕರ್ತರನ್ನೂ ಬೆಳೆಸುವ ಮನೋಭಾವದವರಾಗಿದ್ದಾರೆ ಎಂದು ಅವರು ಹೇಳಿದರು.
ಕೊವಿಡ್ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯ ಸೇರಿದಂತೆ ಎಲ್ಲ ಸಮುದಾಯಗಳಿಗೆ ಯಾವುದೇ ತೊಂದರೆಗಳಾದಾಗ ಎದುರು ನಿಂತು ನಿಭಾಯಿಸುವ ಮೂಲಕ ಬಿಜೆಪಿ ಮುಸ್ಲಿಮರ ವಿರುದ್ಧ ಎಂದಿದ್ದ ಭಾವನೆಯನ್ನು ಹೋಗಲಾಡಿಸಿದ ವೇಣು ಅವರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿರುವುದು ಮಾದರಿಯಾಗಿದೆ. ಹಾಸನ ರಾಜಕೀಯದಲ್ಲಿ ಅಪರೂಪದ ವ್ಯಕ್ತಿ ವೇಣು ಎಂದು ಕಾರ್ಯಕರ್ತರು ಹೇಳುತ್ತಾರೆ. ಶಾಸಕ ಪ್ರೀತಂ ಗೌಡ ಅವರು ಸಿಗದಿದ್ದರೆ, ವೇಣು ಅವರನ್ನು ಸಂಪರ್ಕಿಸಿದರೆ, ನಮ್ಮ ಕೆಲಸವನ್ನು ಶಾಸಕರ ಮೂಲಕ ಅವರು ಮಾಡಿಸಿ ಕೊಡುತ್ತಾರೆ ಎನ್ನುವಷ್ಟರ ಮಟ್ಟಿಗೆ ಜನರು ವೇಣು ಅವರ ಸಾಮಾಜಿಕ ಕಾರ್ಯಗಳ ಮೇಲೆ ವಿಶ್ವಾಸ ಇಟ್ಟಿದ್ದಾರೆ ಎಂದು ಸಚಿನ್ ತಿಳಿಸಿದರು.