ಜಪಾನಿನ ಮಾಜಿ ಪ್ರಧಾನಿ ಪ್ರಧಾನಿ ಶಿಂಜೊ ಅಬೆಯ ಬರ್ಬರ ಹತ್ಯೆ!
ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆಯಾಗಿದ್ದಾರೆ. ಇಂದು ಬೆಳಗ್ಗೆ ಜಪಾನ್ ನ ನಾರಾದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದಾಗ ದುಷ್ಕರ್ಮಿಗಳು ಅವರ ಎದೆಗೆ ಗುಂಡು ಹಾರಿಸಿದ್ದು , ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ವರದಿಗಳ ಪ್ರಕಾರ, ನೌಕಾಪಡೆಯ ಮಾಜಿ ಸದಸ್ಯ ಯಮಗಾಮಿ ತೆತ್ಸುಯಾ, ಶಿಂಜೋ ಅಬೆಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಗುಂಡು ಹಾರಿಸಿದ ನಂತರವೂ ಶಂಕಿತ ವ್ಯಕ್ತಿ ಸ್ಥಳದಲ್ಲಿಯೇ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈವಾಗ ಶಂಕಿತ ಯಮಗಾಮಿ ತೆತ್ಸುಯಾ ಪೊಲೀಸ್ ಕಸ್ಟಡಿಯಲ್ಲಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಘಟನೆಯ ಬಗ್ಗೆ ರಾಜತಾಂತ್ರಿಕ ಪ್ರತಿನಿಧಿಯಿಂದ ಮಾಹಿತಿ ಕೇಳಿದ್ದಾರೆ.
ಆಗಸ್ಟ್ 2020 ರಲ್ಲಿ ಶಿಂಜೋ ಅಬೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಭಾರತವು ಶಿಂಜೋ ಅಬೆಯವರಿಗೆ ಅತ್ಯುನ್ನತ ಗೌರವವಾದ ಪದ್ಮವಿಭೂಷಣ ನೀಡಿ ಕೂಡ ಗೌರವಿಸಲಾಗಿತ್ತು.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಜಪಾನ್ ಗೆ ಆಗಮಿಸಿದ್ದಾರೆ. ಅಬೆ ಕೂಡ ಭಾರತದೊಂದಿಗೆ ಸದಾ ನಿಕಟ ಸ್ನೇಹವನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು. ಇದಲ್ಲದೆ ಶಿಂಜೋ ಅಬೆ ಭಾರತದೊಂದಿಗಿನ ಎಲ್ಲಾ ಸಂಬಂಧಗಳನ್ನು ಬಲವಾಗಿ ಬೆಂಬಲಿಸಿದ ವ್ಯಕ್ತಿ ಕೂಡ ಆಗಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka