ನೋವಿನಿಂದಲೇ ಡೀಕಯ್ಯನವರ ಅಂತಿಮ ದರ್ಶನ ಪಡೆದ ಗಣ್ಯರು, ಸಾರ್ವಜನಿಕರು
ಬೆಳ್ತಂಗಡಿ: ಬಹುಜನ ಹಿರಿಯ ನಾಯಕ ಪಿ.ಡೀಕಯ್ಯನವರ ಅಂತಿಮ ದರ್ಶನವು ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಹಲವಾರು ಗಣ್ಯರು ಡೀಕಯ್ಯನವರ ಅಂತಿಮ ದರ್ಶನ ಪಡೆದುಕೊಂಡರು.
ಮಾಜಿ ಸಚಿವ, ಕೊಳ್ಳೇಗಾಲ ಶಾಸಕ ಎನ್.ಮಹೇಶ್, ಮಾಜಿ ಶಾಸಕ ವಸಂತ ಬಂಗೇರ, ಯುವ ಹೋರಾಟಗಾರ ಹರಿರಾಮ್ ಎ. ಸೇರಿದಂತೆ ವಿವಿಧ ರಾಜ್ಯ ಮಟ್ಟದ ಗಣ್ಯರು ಭಾಗಿಯಾಗಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸಂಘಟನೆಯ ನಾಯಕರು, ಪದಾಧಿಕಾರಿಗಳು, ಮುಖಂಡರು, ಅಂಬೇಡ್ಕರ್ ವಾದಿಗಳು ಹಾಗೂ ಸಾರ್ವಜನಿಕರು ಅಂಬೇಡ್ಕರ್ ಭವನದಲ್ಲಿ ಅಂತಿಮ ದರ್ಶನ ಪಡೆದುಕೊಂಡರು.
ಡೀಕಯ್ಯನವರ ಧರ್ಮ ಪತ್ನಿ , ಹೋರಾಟಗಾರ್ತಿ ಆತ್ರಾಡಿ ಅಮೃತ ಶೆಟ್ಟಿ, ನೋವು ತುಂಬಿದ ಹೆಜ್ಜೆಗಳೊಂದಿಗೆ ಅಂಬೇಡ್ಕರ್ ಭವನಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದರು.
ಅಂತಿಮ ದರ್ಶನದ ಬಳಿಕ ಪಾರ್ಥೀವ ಶರೀರವನ್ನು ಪದ್ಮುಂಜಕ್ಕೆ ರವಾನಿಸಲಾಗಿದ್ದು, ಪದ್ಮುಂಜದಲ್ಲಿ ಬೌದ್ಧ ಸಂಪ್ರದಾಯದಂತೆ ಅಂತ್ಯ ಕ್ರಿಯೆ ನಡೆಸಲು ಸಿದ್ಧತೆ ನಡೆಸಲಾಗಿದೆ. ಅಂತ್ಯಕ್ರಿಯೆಯಲ್ಲಿ ನೂರಾರು ಜನರು ಪಾಲ್ಗೊಳ್ಳಲಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka