ಬೆಳ್ತಂಗಡಿ: ಜುಲೈ 17ರಂದು ಪಿ.ಡೀಕಯ್ಯನವರಿಗೆ ನುಡಿನಮನ
ಬೆಳ್ತಂಗಡಿ: ಬಹುಜನ ಚಿಂತಕ, ದಲಿತ ಚಳುವಳಿಯ ನೇತಾರ, ಮಹಾಬೌದ್ಧ ಉಪಾಸಕ ಪಿ.ಡೀಕಯ್ಯನವರ ನಿಧನದ ಹಿನ್ನೆಲೆಯಲ್ಲಿ ಅವರಿಗೆ ಶ್ರದ್ಧಾಂಜಲಿ ಸಭೆ ಏರ್ಪಡಿಸುವ ನಿಟ್ಟಿನಲ್ಲಿ ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ಸೋಮವಾರ ಸಭೆ ನಡೆಯಿತು.
ಸಭೆಯಲ್ಲಿ ಜುಲೈ 17ರಂದು ‘ಪಿ.ಡೀಕಯ್ಯನವರಿಗೆ ನುಡಿನಮನ’ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು. ಅಂದು ಬೆಳಗ್ಗೆ 9:30ರಿಂದ ಬೆಳ್ತಂಗಡಿಯ ನಾರಾಯಣ ಗುರು ಸಭಾಭವನದಲ್ಲಿ ಕಾರ್ಯಕ್ರಮಗಳು ಆರಂಭವಾಗಲಿದೆ.
ದಲಿತ ಸಮನ್ವಯ ಸಮಿತಿ ಮತ್ತು ಬಹುಜನ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಲಿದೆ.
ಪೂರ್ವಭಾವಿ ಸಭೆಯಲ್ಲಿ ದಲಿತ ಮುಖಂಡ ಅಚ್ಚುತ ಸಂಪಿಗೆ, ಬಿಎಸ್ ಪಿ ದ. ಕ. ಜಿಲ್ಲಾಧ್ಯಕ್ಷ ದಾಸಪ್ಪ ಎಡಪದವು , ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ, ಬಿಎಸ್ ಪಿ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಪದ್ಮುಂಜ, ದಲಿತ ಮುಖಂಡ ಸಂಜೀವ ಆರ್. , ದಲಿತ ಚಿಂತಕ ರಮೇಶ್ ಬೋಧಿ, ಶೇಖರ್ ಲೈಲಾ, ದ.ಸಂಸ. ರಾಜ್ಯ ಸಮಿತಿ ಸದಸ್ಯ ಚಂದು ಎಲ್. , ತುಳುನಾಡು ಮನ್ಸ ಸಂಘದ ಆಧ್ಯಕ್ಷ ವೆಂಕಣ್ಣ ಕೊಯ್ಯೂರು, ಪರಿವರ್ತನಾ ವೇದಿಕೆಯ ಬಂಟ್ವಾಳ ತಾಲೂಕು ಅಧ್ಯಕ್ಷ ಚೆನ್ನಪ್ಪ ಕಕ್ಕೆಪದವು, ಸತ್ಯಸಾರಮಾನಿ ಯುವ ಸೇನೆ ಅಧ್ಯಕ್ಷ ಸುರೇಶ್ ಪಿ. ಬಿ., ದಲಿತ ಮುಖಂಡ ಶೇಖರ್ ವಿ. ಜಿ., ಯುವ ಬರಹ ಸತೀಶ್ ಕಕ್ಕೆಪದವು, ದಲಿತ ಮುಖಂಡ ಬಿ. ಕೆ. ವಸಂತ್ , ಪತ್ರಕರ್ತ ರಾಜೇಶ್ ನೆತ್ತೋಡಿ, ಪತ್ರಕರ್ತ ಅಚ್ಚು ಶ್ರೀ , ದಲಿತ ಮುಖಂಡ ಉದಯ ಗೋಳಿಯಂಗಡಿ , ದಲಿತ ಮುಖಂಡ ಲೋಕೇಶ್ ನೀರಾಡಿ, ಸುಕೇಶ್ ಮಾಲಾಡಿ ಮತ್ತಿತರರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka