ನೀರು ಖರೀದಿಸಿದ ಕೆಲವೇ ಕ್ಷಣದಲ್ಲಿ ಹಾರಿ ಹೋಗಿತ್ತು ಯುವತಿಯ ಪ್ರಾಣ - Mahanayaka
7:29 AM Saturday 14 - December 2024

ನೀರು ಖರೀದಿಸಿದ ಕೆಲವೇ ಕ್ಷಣದಲ್ಲಿ ಹಾರಿ ಹೋಗಿತ್ತು ಯುವತಿಯ ಪ್ರಾಣ

thrisshur
12/07/2022

ತ್ರಿಶೂರ್: ರೈಲು ಪ್ರಯಾಣದ ವೇಳೆ ನೀರು ಖರೀದಿಸಲು ಪ್ಲಾಟ್‌ ಫಾರ್ಮ್‌ಗೆ ಇಳಿದು, ವಾಪಸ್ ಬರುವಾಗ ಆಯ ತಪ್ಪಿ ಮಹಿಳೆಯೊಬ್ಬರು ಟ್ರ್ಯಾಕ್ ಮೇಲೆ ಬಿದ್ದಿದ್ದು, ಅವರ ಮೇಲೆ ರೈಲು ಹರಿದ ಪರಿಣಾಮ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಕೊಚ್ಚಿ ತೊಪ್ಪುಂಪಾಡಿ ಮುಂಡಂವೇಲಿ ಮುಕ್ಕತುಪರಂ ಅರೈಕ್ಕಲ್ ಜೇಕಬ್ ಬಿನು ಮತ್ತು ಮೇರಿ ರೀನಾ ದಂಪತಿಯ ಪುತ್ರಿ ಅನು ಜೇಕಬ್ (22)  ಮೃತಪಟ್ಟವರಾಗಿದ್ದು, ತನ್ನ ತಂದೆ ಮತ್ತು ತಾಯಿಯೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ತ್ರಿಶೂರ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಪ್ಲಾಟ್‌ಫಾರ್ಮ್‌ಗೆ ಇಳಿದು ನೀರು ಖರೀದಿಸಿ ಮತ್ತೆ ಕೋಚ್‌ ಗೆ ಮರಳುವ ವೇಳೆ ಕಾಲು ಜಾರಿ ಹಳಿ ಮೇಲೆ ಬಿದ್ದಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅನು ಜೇಕಬ್  ತಮ್ಮ ಕುಟುಂಬ ಸದಸ್ಯರೊಂದಿಗೆ ವೇನಾಡ್ ಎಕ್ಸ್‌ ಪ್ರೆಸ್‌ ನಲ್ಲಿ ಮಲಪ್ಪುರಂನಲ್ಲಿರುವ ಕುಟುಂಬ ಸ್ನೇಹಿತರ ಮನೆಗೆ ಹೋಗುತ್ತಿದ್ದರು.  ರೈಲು ತ್ರಿಶೂರ್ ತಲುಪಿದಾಗ, ಅನು ತನ್ನ ಸೋದರಸಂಬಂಧಿಯೊಂದಿಗೆ ನೀರು ಖರೀದಿಸಲು ಪ್ಲಾಟ್‌ಫಾರ್ಮ್‌ಗೆ ಇಳಿದಳು.  ಆದರೆ ಅವರು ಹಿಂದಿರುಗುವ ಮೊದಲು ರೈಲು ಹೊರಟಿತು. ಓಡಿ ಬಂದು ರೈಲು ಹತ್ತುವ ವೇಳೆ ಈ ದುರ್ಘಟನೆ ನಡೆದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ