ಗೃಹಪ್ರವೇಶಕ್ಕೆ ಸಿದ್ಧಗೊಂಡಿದ್ದ ಮನೆ ಮೇಲೆ ಕುಸಿದ ಗುಡ್ಡ: ಮನೆ ನೆಲಸಮ - Mahanayaka

ಗೃಹಪ್ರವೇಶಕ್ಕೆ ಸಿದ್ಧಗೊಂಡಿದ್ದ ಮನೆ ಮೇಲೆ ಕುಸಿದ ಗುಡ್ಡ: ಮನೆ ನೆಲಸಮ

sullia
13/07/2022

ಸುಳ್ಯ: ಭಾರೀ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆ ತತ್ತರಿಸಿದ್ದು, ಇಂದು ಕೊಂಚ ಮಳೆ ಕಡಿಮೆಯಾಗಿದ್ದರೂ ಸಂಜೆಯ ವೇಳೆಗೆ ವಿವಿಧ ಕಡೆಗಳಲ್ಲಿ ಮಳೆ ಜೋರಾಗಿದೆ.  ಈ ನಡುವೆ ಜಿಲ್ಲೆಯ ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕ ಗೃಹ ಪ್ರವೇಶಕ್ಕೆ ಸಿದ್ಧವಾಗಿದ್ದ ಮನೆಯೊಂದು ಗುಡ್ಡ ಕುಸಿದ ಪರಿಣಾಮ ನೆಲಸಮವಾಗಿದೆ.

ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕ ಬಳಿ ಮೂರು ದಿನದ ಹಿಂದೆ ಮರ ಬಿದ್ದು ಮನೆ ಗೋಡೆಗಳಲ್ಲಿ ಬಿರುಕು ಮೂಡಿತ್ತು. ಬಿರುಕು ಬಿದ್ದಿರುವುದನ್ನು ದುರಸ್ತಿ ನಡೆಸಿದ ಬೆನ್ನಲ್ಲೇ ಭಾರೀ ಮಳೆಯ ಹಿನ್ನೆಲೆಯಲ್ಲಿ ಗುಡ್ಡ ಕುಸಿದು ಮನೆಯ ಮೇಲೆ ಬಿದ್ದಿದ್ದು, ಮನೆ ನೆಲಸಮವಾಗಿದೆ.

ಮನೆಯವರ ಲೆಕ್ಕಚಾರದ ಪ್ರಕಾರ ಜುಲೈ 18ರಂದು ಗೃಹಪ್ರವೇಶವಾಗಬೇಕಿತ್ತು. ಹೊಸ ಮನೆಯ ಬದುಕಿನ ಬಗ್ಗೆ ನೂರಾರು ಕನಸುಗಳನ್ನು ಹೊತ್ತಿದ್ದ ಕುಟುಂಬ ಇದೀಗ ಮಳೆಯಾಟಕ್ಕೆ ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ