ವಿಕೃತಿಯ ಕೃತಿ ರಚಿಸಿದ್ದರೆ ಅದು ಪ್ರತಾಪ್ ಸಿಂಹ ಮಾತ್ರ: ಡಾ.ಯತೀಂದ್ರ ಸಿದ್ದರಾಮಯ್ಯ ಗುಡುಗು
ಮೈಸೂರು: ವಿಕೃತಿಯ ಕೃತಿ ರಚಿಸಿದ್ದರೆ ಅದು ಪ್ರತಾಪ್ ಸಿಂಹ ಮಾತ್ರ ಎಂದು ವರುಣ ಶಾಸಕ ಹಾಗೂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಹಿತಿ ದೇವನೂರು ಮಹದೇವ ರಚಿಸಿರುವ ‘ಆರ್ ಎಸ್ ಎಸ್ ಆಳ ಮತ್ತು ಅಗಲ’ ಕೃತಿಯನ್ನು ವಿಕೃತಿ ಎಂದು ಕರೆದಿರುವ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಪ್ರತಾಪ್ ಸಿಂಹ ಈ ಹಿಂದೆ ಏನನ್ನು ಬರೆಯುತ್ತಿದ್ದರು ಎನ್ನುವುದನ್ನು ಒಮ್ಮೆ ನೆನೆಪು ಮಾಡಿಕೊಳ್ಳಲಿ, ಅವರು ಬಿಜೆಪಿ ನಾಯಕರ ವಿರುದ್ಧ ‘ಬೆತ್ತಲೆ ಜಗತ್ತು’ ಎಂಬ ಕೃತಿ ಬರೆದಿದ್ದರು. ಇಂದು ಅದೇ ಪಕ್ಷಕ್ಕೆ ಸೇರಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ನಾಡಿನ ಹಿರಿಯ ಸಾಹಿತಿ ದೇವನೂರು ಮಹಾದೇವ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಅವರನ್ನು ಕಾಂಗ್ರೆಸ್ ಅಡಿಯಾಳು ಎಂದು ಟೀಕಿಸಿರುವುದು ಸಂಸದರ ಮನಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಯಾರಾದರೂ ವಿಕೃತಿಯ ಕೃತಿಗಳನ್ನು ಬರೆದಿದ್ದರೆ ಅದು ಪ್ರತಾಪ್ ಸಿಂಹ ಮಾತ್ರ ಎಂದು ಯತೀಂದ್ರ ಟೀಕಿಸಿದರು.
ಆರೆಸ್ಸೆಸ್ ಈ ಹಿಂದೆ ಬ್ಯಾನ್ ಆಗಿದ್ದ ಸಂಸ್ಥೆ ಅದು ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ಬ್ರಿಟಿಷರ ಜೊತೆ ಸೇರಿಕೊಂಡು ಸಾತಂತ್ರ್ಯ ಹೋರಾಟಗಾರರಿಗೆ ಮೋಸ ಮಾಡಿದ್ದಂತಹ ಸಂಸ್ಥೆ ಎಂದು ಅವರು ಆರೋಪಿಸಿದರು.
ಸಾರ್ವಜನಿಕರ ಪರವಾಗಿ ಕೆಲಸ ಮಾಡಬೇಕಾದ ಸಂಸದರು, ಆರ್ ಎಸ್ ಎಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ವಿರುದ್ಧ ಯತೀಂದ್ರ ಗುಡುಗಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka