ಅಡಕೆ ಮರದಿಂದ ಬಿದ್ದು ಗ್ರಾ.ಪಂ. ಮಾಜಿ ಅಧ್ಯಕ್ಷ ಗಂಭೀರ
ಬೆಳ್ತಂಗಡಿ: ಅಡಕೆ ಮರಕ್ಕೆ ಮದ್ದು ಬಿಡುವ ವೇಳೆ ಅಡಕೆ ಹತ್ತುವ ಟ್ರೀ ಬೈಕ್ ನ ರೋಪ್ ಕಟ್ಟ್ ಅಗಿ 50 ಅಡಿ ಎತ್ತರದಿಂದ ಜಾರಿಬಿದ್ದು ಗ್ರಾ.ಪಂ ಮಾಜಿ ಅಧ್ಯಕ್ಷ ಗಂಭೀರ ಗಾಯಗೊಂಡಿರುವ ಘಟನೆ ಬೆಳ್ತಂಗಡಿಯ ಕಳೆಂಜದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಗುತ್ತಿಮಾರು ನಿವಾಸಿ ನಿತ್ಯಾನಂದ ರೈ(45) ಮನೆಯ ತೋಟದಲ್ಲಿ ಇಂದು ಮಳೆ ಕಡಿಮೆ ಇದ್ದಿದ್ದರಿಂದ ಅಡಕೆ ಮರಕ್ಕೆ ಮದ್ದು ಬೀಡುತ್ತಿದ್ದ ವೇಳೆ ಸಂಜೆ ಮರಕ್ಕೆ ಹತ್ತುವ ಟ್ರೀ ಬೈಕ್ ನ ರೋಪ್ ಕಟ್ಟ್ ಅಗಿ ಕೆಳಗೆ ಬಿದ್ದು ತಲೆಗೆ ಹಾಗೂ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯವಾಗಿದ್ದು ತಕ್ಷಣ ಮನೆಮಂದಿ ಹಾಗೂ ಸ್ಥಳೀಯ ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ , ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ನಿತ್ಯಾನಂದ ರೈ ಕಾಂಗ್ರೆಸ್ ಪಕ್ಷದಲ್ಲಿದ್ದು ಕಳೆಂಜ ಗ್ರಾ.ಪಂ ಮಾಜಿ ಅಧ್ಯಕ್ಷರಾಗಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka