ರಕ್ಷಿತ್ ಶೆಟ್ಟಿಯನ್ನು ‘ಎಡಪಂಥೀಯ’ ಎಂದು ಕರೆದ ಬಲಪಂಥೀಯರು!
ಸಾಯಿಪಲ್ಲವಿ ನಟನೆಯ ‘ಗಾರ್ಗಿ ಚಿತ್ರ ದೇಶಾದ್ಯಂತ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಕನ್ನಡ ಹಕ್ಕನ್ನು ರಕ್ಷಿತ್ ಶೆಟ್ಟಿ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ಬಲಪಂಥೀಯರು ರಕ್ಷಿತ್ ಶೆಟ್ಟಿಗೆ ಎಡಪಂಥೀಯ ಎಂಬ ಪಟ್ಟಕಟ್ಟಿದ್ದಾರೆ.
ಯಾರನ್ನೇ ಆದ್ರು ಕೊಲ್ಲುವುದು ತಪ್ಪು ಎಂಬ ಹೇಳಿಕೆ ನೀಡಿದ್ದ ಸಾಯಿ ಪಲ್ಲವಿ, ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಮುಸ್ಲಿಮರ ಹತ್ಯೆ ಎರಡನ್ನೂ ವಿರೋಧಿಸಿದ್ದರು. ಆದರೆ, ಇದನ್ನು ಬಲಪಂಥೀಯ ಮಾಧ್ಯಮಗಳು ಒಂದು ವಿವಾದವಾಗಿ ಬಿಂಬಿಸಿದ್ದರಿಂದಾಗಿ ಸಾಕಷ್ಟು ಬಲಪಂಥೀಯರು ಸಾಯಿಪಲ್ಲವಿಯನ್ನು ವಿರೋಧಿಸಲು ಆರಂಭಿಸಿದ್ದಾರೆ.
ಸಾಯಿಪಲ್ಲವಿ ನಟನೆಯ ವಿರಾಟ ಪರ್ವಂ ಚಿತ್ರವನ್ನು ಬಲಪಂಥೀಯರು ಬಹಿಷ್ಕರಿಸುವುದಾಗಿ ಹೇಳಿದರು. ಆದರೆ, ಆ ಚಿತ್ರ ಬಿಗ್ ಹಿಟ್ ಆಗಿದ್ದು, ಒಂದೇ ಭಾಷೆಯಲ್ಲಿ ಬಿಡುಗಡೆಯಾದರೂ, ಯಶಸ್ವಿ ಪ್ರದರ್ಶನ ಕಂಡಿದೆ.
ಇದೀಗ ಸಾಯಿಪಲ್ಲವಿ ಚಿತ್ರವನ್ನು ಕರ್ನಾಟಕದಲ್ಲಿ ರಕ್ಷಿತ್ ಶೆಟ್ಟಿ ವಿತರಣೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ರಕ್ಷಿತ್ ಶೆಟ್ಟಿ ವಿರುದ್ಧ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಹಾಯ್ದಿದ್ದಾರೆ. ರಕ್ಷಿತ್ ಎಡಪಂಥೀಯ ಅನ್ನಿಸುತ್ತಿದೆ. ಹಾಗಾಗಿ ಅವನ ಮುಂದಿನ ಚಿತ್ರ ವಿರೋಧಿಸೋಣ ಎಂದು ಸೋಷಿಯಲ್ ಮೀಡಿಯಾದಲ್ಲಿ ದ್ವೇಷಕಾರಿದ್ದಾರೆ.
ಅಸಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುವ ಬಹಿಷ್ಕಾರಗಳು ಇಲ್ಲಿಯವರೆಗೆ ಯಾವುದೂ ಯಶಸ್ವಿಯಾಗಿಲ್ಲ. ಯಾವ ಚಿತ್ರವನ್ನೂ ಬಹಿಷ್ಕರಿಸಿ, ಚಿತ್ರಗಳು ಸೋತ ಉದಾಹರಣೆಗಳಿಲ್ಲ. ಹಾಗಾಗಿ ಬಹಿಷ್ಕಾರದ ಬೆದರಿಕೆಗಳ ಬಗ್ಗೆ ಚಿತ್ರ ನಟ, ನಟಿಯರು, ನಿರ್ದೇಶಕ, ನಿರ್ಮಾಪಕರು, ವಿತರಕರು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka