ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು: ಮನೆ ಕೆಲಸಕ್ಕಿದ್ದ ದಂಪತಿ ಅರೆಸ್ಟ್
ಬಂಟ್ವಾಳ: ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಡ ಹೆಂಡತಿ ಇಬ್ಬರನ್ನು ವಿಟ್ಲ ಪೊಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಎಚ್. ನೇತೃತ್ವದ ತಂಡ ಬಂಧಿಸಿದೆ.
ಪುತ್ತೂರು ಸರ್ವೆ ಗ್ರಾಮದ ಬಾವಿ ಕಟ್ಟೆ ನಿವಾಸಿಗಳಾದ ಪ್ರಮೋದ್ ಹಾಗೂ ಆತನ ಪತ್ನಿ ಸುಮತಿ ಯಾನೆ ಸುಮ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ವಿಟ್ಲ ಮುನ್ನೂರು ದಂಬೆತಾರು ಮನೆಯಿಂದ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಮೂಲದ ದಂಪತಿಗಳನ್ನು ಬಂಧಿಸಲಾಗಿದೆ.
ಇವರಿಬ್ಬರು ದಂಬೆತಾರು ವಿನಯ ಚಂದ್ರನಾಯಕ್ ರವರ ಮನೆಯಲ್ಲಿ ಕೂಲಿ ಕೆಲಸಕ್ಕಿದ್ದು, ಮನೆಯ ಬೆಡ್ ರೂಮ್ ನ ಕಪಾಟಿನಲ್ಲಿದ್ದ ಚಿನ್ನದ ಬ್ರಾಸ್ ಲೈಟ್-1, ಚಿನ್ನದ ಲಕ್ಷ್ಮಿ ಚೈನ್-01, ಚಿನ್ನದ ಪದಕ ಸಹಿತ ಚೈನು -1, ಚಿನ್ನದ ಲಕ್ಷ್ಮಿ ಪದಕ ಸಹಿತ ಚೈನ್-01, ಚಿನ್ನದ ಉಂಗುರಗಳು (Total- 98Gram) ಚಿನ್ನಾಭರಣಗಳು ಸೇರಿ ಅಂದಾಜು 1,48,000 ರೂಪಾಯಿಯ ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದಿದ್ದರು.
ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದು, ಕಳವಾಗಿದ್ದ 98 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka