ಉದ್ಯಾನ ನಗರಿಯಲ್ಲಿ `ಪೌಧೆ ಸೆ ಯಾರಿ' ಪ್ಲಾಂಟ್ ಬೊಟಿಕ್ ಆರಂಭ - Mahanayaka
12:58 PM Thursday 17 - October 2024

ಉದ್ಯಾನ ನಗರಿಯಲ್ಲಿ `ಪೌಧೆ ಸೆ ಯಾರಿ’ ಪ್ಲಾಂಟ್ ಬೊಟಿಕ್ ಆರಂಭ

plant butik
21/07/2022

  • ಬೆಂಗಳೂರಿಗರು ತಮ್ಮ ಹಸಿರನ್ನು ಹೆಮ್ಮೆಯಿಂದ ಬೆಳೆಸುವುದಕ್ಕೆ ಸಹಾಯ ಮಾಡಲು

 

  • ಮನೆಗಳು ಮತ್ತು ಕಚೇರಿಗಳಿಗೆ ಜೀವಂತಿಕೆ ತುಂಬುವ ವಿಶಿಷ್ಟ ಸಸ್ಯಗಳು, ಡಿಸೈನರ್ ಗಿಡಗಳು, ಅಗತ್ಯ ವಸ್ತುಗಳು ಮತ್ತು ಬಿಡಿಭಾಗಗಳು

ಬೆಂಗಳೂರು: `ಪೌಧೆ ಸೆ ಯಾರಿ’, ಪ್ಲಾಂಟ್ ಬೊಟಿಕ್ ಮತ್ತು ಪ್ರಕೃತಿಯಿಂದ ಪ್ರೇರಿತವಾದ ಸ್ಟುಡಿಯೋ, ಕೋರಮಂಗಲದಲ್ಲಿ ಮಳಿಗೆಯನ್ನು ತೆರೆಯುವ ಮೂಲಕ ಉದ್ಯಾನ ನಗರಿ ಬೆಂಗಳೂರಿಗೆ ವಿಸ್ತರಿಸಿದೆ. ಬೆಂಗಳೂರಿನ ಖ್ಯಾತ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಯಾಗುವ ಮೂಲಕ ಈ ಬೊಟಿಕ್ ತನ್ನ ಕಾರ್ಯಾಚರಣೆಯನ್ನು ಆರಂಭಿಸಿತು.

ಹೈದರಾಬಾದ್ನಲ್ಲಿ ಆಗಸ್ಟ್ 2017ರಲ್ಲಿ ಚಾಲನೆ ಪಡೆದಿರುವ `ಪೌಧೆ ಸೆ ಯಾರಿ ಗಿಫ್ಟ್-ಎ-ಪ್ಲಾಂಟ್ ಕಾನ್ಸೆಪ್ಟ್ ಸ್ಟೋರ್’ ಯಶಸ್ವಿಯಾಗಿ ನಡೆಯುತ್ತಿದ್ದು, ಇದನ್ನು ಅನುಸರಿಸಿ ಬೆಂಗಳೂರು ಶಾಖೆಯನ್ನು ಆರಂಭಿಸಲಾಗಿದೆ. ತನ್ನ ಆನ್ ಲೈನ್ ಸ್ಟೋರ್ paudheseyaari.com ಮೂಲಕ ಈ ಸೇವೆಯು ಭಾರತದ ಎಲ್ಲೆಡೆಯ ಗ್ರಾಹಕರಿಗೆ ಲಭ್ಯವಿದೆ.

ಲಭ್ಯ ಸ್ಥಳಗಳನ್ನು ಪರಿವರ್ತಿಸಲು ಮತ್ತು ಅಸಾಂಪ್ರದಾಯಿಕ ಹಾಗೂ ಬಯೋಫಿಲಿಕ್ ವಿನ್ಯಾಸಗಳಲ್ಲಿ ವಿಶಿಷ್ಟ ಶ್ರೇಣಿಯ ಸಸ್ಯಗಳೊಂದಿಗೆ ಅವುಗಳಿಗೆ ಜೀವಂತಿಕೆ ತುಂಬುವ ಭರವಸೆಯನ್ನು ಪೌಧೆ ಸೆ ಯಾರಿ ನೀಡುತ್ತದೆ.

“ಹೈದರಾಬಾದ್ನಲ್ಲಿ ನಾವು ಗಳಿಸಿರುವ ಅನುಭವವು ದೇಶದ ಉದ್ಯಾನ ನಗರಿ ಬೆಂಗಳೂರಿನಲ್ಲಿ ಹೊಸ ಮಳಿಗೆಯನ್ನು ತೆರೆಯಲು ತಮ್ಮ ವ್ಯವಹಾರವನ್ನು ವಿಸ್ತರಿಸಲು ನಮಗೆ ಆತ್ಮವಿಶ್ವಾಸ ಮತ್ತು ಪ್ರೇರಣೆ ನೀಡಿತು. ಬೆಂಗಳೂರಿನ ಮನೆಗಳು ಮತ್ತು ಕೆಲಸದ ಸ್ಥಳಗಳಿಗೆ ಸುಸ್ಥಿರ ಸಸ್ಯಗಳು, ನೆಡುತೋಪುಗಳು ಮುಂತಾದವುಗಳನ್ನು ಒದಗಿಸುವ ನಮ್ಮ ಪ್ರಯತ್ನಗಳಿಗೆ ನಿಮ್ಮನ್ನು ಸ್ವಾಗತಿಸಲು ನಾವು ತುಂಬಾ ಉತ್ಸುಕರಾಗಿದ್ದೇವೆ ಮತ್ತು ಕೊಂಚ ಆತಂಕಿತರೂ ಆಗಿದ್ದೇವೆ. ಜನರಿಗೆ ದೃಶ್ಯ ವೈಭವವನ್ನು ನೀಡುವುದು ಮತ್ತು ಅವರ ಬಾಲ್ಕನಿಗಳು, ಉದ್ಯಾನಗಳು ಮತ್ತು ವಾಸಸ್ಥಳಗಳಿಗೆ ಹೊಸ ಸ್ಪರ್ಶ ನೀಡಲು ಸಹಾಯ ಮಾಡುವುದು ನಮ್ಮ ಉದ್ದೇಶ. ಜನರನ್ನು ಪ್ರಕೃತಿಯೊಂದಿಗೆ ಮತ್ತೆ ಬೆಸೆಯುವುದು ಮತ್ತು ಸಸ್ಯ ವಿನ್ಯಾಸದ ಬಗ್ಗೆ ನಮ್ಮ ಪ್ರೀತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ನಮ್ಮ ಗುರಿಯಾಗಿದೆ. ಜನರಿಗೆ ಹೊರಾಂಗಣಗಳನ್ನು ತಮ್ಮ ಒಳಾಂಗಣಕ್ಕೆ ತರಲು ಸಹಾಯ ಮಾಡುವುದನ್ನು ನಾವು ಇಷ್ಟಪಡುತ್ತೇವೆ,” ಎಂದು ಪೌಧೆ ಸೆ ಯಾರಿ ಸಂಸ್ಥಾಪಕ ಗುಂಜನ್ ಡೊಮಿಂಗೊ ಅಭಿಪ್ರಾಯ ಹಂಚಿಕೊಂಡರು.

ಪೌಧೆ ಸೆ ಯಾರಿ ಸೃಜನಾತ್ಮಕ ನೋಟ ಮತ್ತು ಕಲ್ಪನೆಯೊಂದಿಗೆ ಸಸ್ಯಗಳನ್ನು ವಿನ್ಯಾಸಗೊಳಿಸುವ ಮೂಲಕ ಇತರ ನರ್ಸರಿಗಳಿಗಿಂತ ಭಿನ್ನವಾಗಿದೆ. ಸಂಗ್ರಹಕ್ಕೆ ಮೂಲ ಸ್ಪರ್ಶವನ್ನು ನೀಡಲು ಕಲಾವಿದರೊಂದಿಗೆ ಸೇರಿ ಈ ಸಂಸ್ಥೆಯು ಕೆಲಸ ಮಾಡುತ್ತದೆ. ಸೃಜನಾತ್ಮಕತೆಯನ್ನು ಸಸ್ಯಗಳ ನೈಸರ್ಗಿಕ ಸೌಂದರ್ಯದೊಂದಿಗೆ ಸಂಯೋಜಿಸುವುದು ಸೌಂದರ್ಯದ ಅದ್ಭುತ ಆಯ್ಕೆಗಳನ್ನು ಸೃಷ್ಟಿಸುತ್ತದೆ. ಅಂತಿಮ ಬಳಕೆದಾರರು ಮತ್ತು ಉಡುಗೊರೆ ನೀಡುವ ಜನರ ಮನ ಗೆಲ್ಲುವಲ್ಲಿ ಹೈದರಾಬಾದ್ನ ಮಳಿಗೆ ಯಶಸ್ವಿಯಾಗಿದೆ.

“ಸೃಜನಶೀಲತೆ, ಪ್ರಕೃತಿ ಮತ್ತು ಜನರ ನಡುವಿನ ಮಾಧ್ಯಮವಾಗಲು ನಮ್ಮ ಜೀವನಕ್ಕೆ ಅರ್ಥವನ್ನು ತರುತ್ತಿರುವುದನ್ನು ಕಂಡು ಆನಂದವಾಗುತ್ತಿದೆ. ಸಸ್ಯ ಶಾಸ್ತ್ರದ ಸೌಂದರ್ಯವನ್ನು ಜಾಗೃತಗೊಳಿಸುವುದು ಮತ್ತು ರಚಿಸುವುದು ವರ್ಣನಾತೀತವಾಗಿದೆ. ಜತೆಗೆ, ಇದೇ ರೀತಿಯ ಅನುಭವವನ್ನು ಹಂಚಿಕೊಳ್ಳುವ ಜನರನ್ನು ನೋಡುವುದು ಮತ್ತು ಭೇಟಿಯಾಗುವುದು ಪುಷ್ಟಿದಾಯಕವಾಗಿರುತ್ತದೆ” ಎಂದು ಡೊಮಿಂಗೊ ವಿವರಿಸಿದರು.

ಬೆಂಗಳೂರಿನಲ್ಲಿ ಹೊಸ ಬೊಟಿಕ್ 880, 6ನೇ ಬ್ಲಾಕ್, 6ನೇ ಕ್ರಾಸ್, ಕೋರಮಂಗಲ ಕ್ಲಬ್ ರಸ್ತೆ, ಕೋರಮಂಗಲ, ಬೆಂಗಳೂರು 560095 – ಈ ವಿಳಾಸದಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಲಾಗ್ ಇನ್ ಮಾಡಿ: paudheseyaari.com

ಇತ್ತೀಚಿನ ಸುದ್ದಿ