ಮಳಲಿ ಪೇಟೆ ಮಸೀದಿ ಪ್ರಕರಣ: ತೀರ್ಪು ಯಾವಾಗ?
ಮಂಗಳೂರು: ಮಳಲಿ ಪೇಟೆ ಮಸೀದಿ ಪ್ರಕರಣ ತೀರ್ಪನ್ನು ಮಂಗಳೂರು ಸಿವಿಲ್ ನ್ಯಾಯಾಲಯವು ಆಗಸ್ಟ್ 1ಕ್ಕೆ ಮುಂದೂಡಿದೆ.
ಸ್ಥಳೀಯರಾದ ಮನೋಜ್, ಧನಂಜಯ ಮತ್ತಿತರರು ಹೈಕೋರ್ಟ್ ಗೆಅರ್ಜಿ ಸಲ್ಲಿಸಿ ಸಿವಿಲ್ ನ್ಯಾಯಾಲಯವು ಮಳಲಿ ಮಸೀದಿ ಸಂಬಂಧ ಯಾವುದೇ ತೀರ್ಪು ನೀಡಲು ತಡೆಯಾಜ್ಞೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು.
ಅವರ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಹೈಕೋರ್ಟ್, ಸಿವಿಲ್ ನ್ಯಾಯಾಲಯದ ಕಾರ್ಯವೈಖರಿ ಸರಿಯಾದ ನೆಲೆಯಲ್ಲಿಯೇ ಇದೆ ಎಂದು ಧನಂಜಯ ಮತ್ತು ಮನೋಜ್ ಕುಮಾರ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತ್ತು.
ಶುಕ್ರವಾರ ಮಂಗಳೂರು ಸಿವಿಲ್ ನ್ಯಾಯಾಲಯ ತೀರ್ಪು ನೀಡುವ ಸಾಧ್ಯತೆಗಳಿದ್ದರೂ, ಮಸೀದಿ ಪರ ವಕೀಲರು ಇಂದು ಹೈಕೋರ್ಟ್ ನ ಆದೇಶ ಪ್ರತಿಯನ್ನು ಸಿವಿಲ್ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಹೀಗಾಗಿ ಮಂಗಳೂರು ಸಿವಿಲ್ ನ್ಯಾಯಾಲವು ಪ್ರಕರಣ ತೀರ್ಪನ್ನು ಆಗಸ್ಟ್ 1 ಕ್ಕೆ ಮುಂದೂಡಿ ಆದೇಶಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka