ಜುಲೈ 23: ಮಂಗಳೂರು, ಮೂಡುಬಿದಿರೆಯ ವಿವಿಧೆಡೆ ವಿದ್ಯುತ್ ವ್ಯತ್ಯಯ
ಮಂಗಳೂರು: 33/11ಕೆ.ವಿ ಅತ್ತಾವರ ಉಪಕೇಂದ್ರದಿಂದ ಹೊರಡುವ 11ಕೆ.ವಿ ವಿಶ್ವಭವನ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.
ಈ ಹಿನ್ಮೆಲೆಯಲ್ಲಿ ಜು.23ರ ಬೆಳಿಗ್ಗೆ 10 ರಿಂದ ಸಂಜೆ 4ರ ವರೆಗೆ ಕೆ.ಎಸ್. ರಾವ್ ರೋಡ್, ಓಲ್ಡ್ ಬಸ್ ಸ್ಟ್ಯಾಂಡ್, ಹಂಪನಕಟ್ಟೆ, ಶರವು ಟೆಂಪಲ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಬೆಳುವಾಯಿ, ಶಿರ್ತಾಡಿಯಲ್ಲೂ ಪವರ್ ಕಟ್:
ಮೂಡಬಿದ್ರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆ.ವಿ ಬೆಳುವಾಯಿ ಮತ್ತು ಶಿರ್ತಾಡಿ ಫೀಡರ್ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿದೆ.
ಹಾಗಾಗಿ ಜು.23ರ ಬೆಳಿಗ್ಗೆ 10 ರಿಂದ ಸಂಜೆ 4ರ ವರೆಗೆ ಕಾನ, ಕಲ್ಲೋಳಿ, ನಡಿಗುಡ್ಡೆ, ಕಾಂತಾವರ ಕ್ರಾಸ್, ಬೆಳುವಾಯಿ, ಬನ್ನಡ್ಕ, ಕಾಯರ್ ಕಟ್ಟೆ, ಆಜಾದ್ ನಗರ, ಕರಿಯನಂಗಡಿ, ಮಲೆಬೆಟ್ಟು, ಮಂಜನಕಟ್ಟೆ, ಕಾಯಿದೆ, ಕೆಸರಗದ್ದೆ, ಪೆಲಕುಂಜ, ಶಾಂತಿನಗರ, ಮೂಡಾಯಿಕಾಡು, ಇರ್ವತ್ತೂರು ಕ್ರಾಸ್, ಗುಂಡುಕಲ್ಲು, ಮೂಡುಮಾರ್ನಾಡು, ಕೆಲ್ಲಪುತ್ತಿಗೆ, ದರೆಗುಡ್ಡೆ, ಅರಸುಕಟ್ಟೆ, ಪಣಪಿಲ, ಬಸವನಕಜೆ, ಅಮನೊಟ್ಟು, ಆನೆಗುಡ್ಡೆ, ಜೋಗೊಟ್ಟು, ವಾಲ್ಪಾಡಿ, ಶಿರ್ತಾಡಿ, ಮಕ್ಕಿ, ಶಿಮುಂಜೆ, ಅಳಿಯೂರು, ಬೋರುಗುಡ್ಡೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka