ಪತ್ನಿಯನ್ನು ತವರಿನಿಂದ ಕರೆತನ್ನಿ: ಟವರ್ ಏರಿ ಕುಳಿತು ಗ್ರಾಮಸ್ಥರನ್ನು ಸತಾಯಿಸಿದ ವ್ಯಕ್ತಿ!
ಮಹಾರಾಷ್ಟ್ರ: ವ್ಯಕ್ತಿಯೋರ್ವ ಮೊಬೈಲ್ ಟವರ್ ಏರಿ ವಿಚಿತ್ರ ಬೇಡಿಕೆಯಿಟ್ಟ ಘಟನೆ ನಡೆದಿದ್ದು, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಟವರ್ ಹತ್ತಿದ ವ್ಯಕ್ತಿಯಿಂದಾಗಿ ಪೊಲೀಸ್ ಸಿಬ್ಬಂದಿ, ಗ್ರಾಮಸ್ಥರು, ಅಗ್ನಿಶಾಮಕದಳದವರು ಸುಸ್ತಾಗಿದ್ದಾರೆ.
ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಗಣಪತ್ ಬಾಕಲ್ ಎಂಬಾತ 100 ಅಡಿ ಎತ್ತರದ ಮೊಬೈಲ್ ಟವರ್ ಮೇಲೆ ಹತ್ತಿದ್ದು, ನನ್ನ ಪತ್ನಿ ತವರು ಮನೆಗೆ ಹೋದವಳು ಇನ್ನೂ ಬಂದಿಲ್ಲ. ಅವಳು ಮರಳಿ ಬರದಿದ್ದರೆ, ಟವರ್ ನಿಂದ ಹಾರುವುದಾಗಿ ಗ್ರಾಮಸ್ಥರನ್ನು ಬೆದರಿಸಿದ್ದಾನೆ.
ಸುಮಾರು ನಾಲ್ಕು ಗಂಟೆಗಳ ಕಾಲ ಟವರ್ ಏರಿದ್ದ ವ್ಯಕ್ತಿ ಗ್ರಾಮಸ್ಥರನ್ನು ಸತಾಯಿಸಿದ್ದಾನೆ. ಬಳಿಕ ಕೌಟುಂಬಿಕ ಸಮಸ್ಯೆ ಸರಿಪಡಿಸುವ ಭರವಸೆ ನೀಡಿದ ಬಳಿಕ ಆತ ಟವರ್ ನಿಂದ ಕೆಳಗಿಳಿದಿದ್ದು, ಈ ವೇಳೆ ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka