ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಗೆದ್ದ ನೀರಜ್ ಚೋಪ್ರಾ
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಫೈನಲ್ ನಲ್ಲಿ ನೀರಜ್ ಚೋಪ್ರಾ ಅದ್ಭುತ ಪ್ರದರ್ಶನ ನೀಡಿದ್ದು, ದೇಶಕ್ಕೆ ಬೆಳ್ಳಿ ಪದಕಕ್ಕೆ ನೀಡಿದ್ದಾರೆ.
ಈ ಸಾಧನೆ ಭಾರತದ ಪಾಲಿಗೆ ಹೆಮ್ಮೆ ಎಂದೆನ್ನಬಹುದು. ಏಕೆಂದರೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ನೀರಜ್ ಚೋಪ್ರಾ ಭಾಜನರಾಗಿದ್ದಾರೆ.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಫೈನಲ್‌ನಲ್ಲಿ ನೀರಜ್ ಚೋಪ್ರಾ ಅವರ ಚೊಚ್ಚಲ ಪಂದ್ಯ ಉತ್ತಮವಾಗಿರಲಿಲ್ಲ. ನೀರಜ್ ಚೋಪ್ರಾ ಅವರ ಮೊದಲ ಎಸೆತವು ಫೌಲ್ ಎಂದು ಸಾಬೀತಾಯಿತು. ಮೊದಲ ಪ್ರಯತ್ನದಲ್ಲಿಯೇ ವಿಫಲರಾದ ಚೋಪ್ರಾ, ಎರಡನೇ ಸುತ್ತಿನಲ್ಲಿ ಜಾವೆಲಿನ್ ಅನ್ನು 82.39 ಮೀಟರ್ ದೂರಕ್ಕೆ ಎಸೆದರು.
ಇನ್ನು ಮೂರನೇ ಸುತ್ತಿನಲ್ಲಿ ತಮ್ಮ ಪ್ರದರ್ಶನವನ್ನು ಸುಧಾರಿಸಿದ್ದರು. ಈ ಸುತ್ತಿನಲ್ಲಿ 86.37 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಪದಕ ಗೆಲ್ಲುವ ಭರವಸೆ ಮೂಡಿಸಿದರು. ಇನ್ನು ನಾಲ್ಕನೇ ಪ್ರಯತ್ನದಲ್ಲಿ, ನೀರಜ್ ಶ್ರಮವನ್ನೆಲ್ಲಾ ಒಗ್ಗೂಡಿಸಿ ಬರೋಬ್ಬರಿ 88.13 ಮೀ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಪದಕ ಗೆಲ್ಲುವ ರೇಸ್ ಗೆ ಪ್ರವೇಶಿಸಿದರು. ಆ ಬಳಿಕ ನಡೆದ ಐದು ಮತ್ತು ಆರನೇ ಸುತ್ತಿನಲ್ಲಿ ಚೋಪ್ರಾ ಎಸೆದ ಜಾವೆಲಿನ್ ಫೌಲ್ ಆಗಿತ್ತು. ಹೀಗಾಗಿ ಬೆಳ್ಳಿ ಪದಕಕ್ಕೆ ಸಂತೃಪ್ತಿ ಪಡೆಯುವಂತಾಯಿತು.
18 ವರ್ಷಗಳ ಹಿಂದೆ ಭಾರತ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದಿತ್ತು. 2003ರಲ್ಲಿ ಅನುಭವಿ ಅಥೀಟ್ ಅಂಜು ಬಾಬಿ ಜಾರ್ಜ್ ಲಾಂಗ್ ಜಂಪ್ ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದರು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಅನ್ನು ಮೊದಲು 1983 ರಲ್ಲಿ ಆಯೋಜಿಸಲಾಯಿತು. ಅಂದಿನಿಂದ ಭಾರತಕ್ಕೆ ಈ ಟೂರ್ನಿಯಲ್ಲಿ ಚಿನ್ನದ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka