ಕಾಂಗ್ರೆಸ್ ಸರ್ಕಾರ ಇದ್ದಾಗ ನನಗೆ ಇಬ್ಬರು ಗನ್ ಮ್ಯಾನ್ ಇದ್ರು , ಬಿಜೆಪಿ ಬಂದ ಮೇಲೆ ಒಬ್ಬನನ್ನು ಕಿತ್ತುಕೊಂಡಿದ್ದಾರೆ: ಪ್ರಮೋದ್ ಮುತಾಲಿಕ್ - Mahanayaka
9:33 PM Wednesday 5 - February 2025

ಕಾಂಗ್ರೆಸ್ ಸರ್ಕಾರ ಇದ್ದಾಗ ನನಗೆ ಇಬ್ಬರು ಗನ್ ಮ್ಯಾನ್ ಇದ್ರು , ಬಿಜೆಪಿ ಬಂದ ಮೇಲೆ ಒಬ್ಬನನ್ನು ಕಿತ್ತುಕೊಂಡಿದ್ದಾರೆ: ಪ್ರಮೋದ್ ಮುತಾಲಿಕ್

muthalik
29/07/2022

ADS

ಬೆಂಗಳೂರು:  ಕಾಂಗ್ರೆಸ್ ಸರ್ಕಾರ ಇದ್ದಾಗ ನನಗೆ ಇಬ್ಬರು ಗನ್ ಮ್ಯಾನ್‍ ಗಳನ್ನು ಕೊಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಒಬ್ಬ ಗನ್ ಮ್ಯಾನ್ ಅನ್ನು ಕಿತ್ತುಕೊಂಡಿದ್ದಾರೆ. ಇದಕ್ಕೆ ನನ್ನ ಧಿಕ್ಕಾರವಿದೆ ಎಂದು ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಪ್ರವೀಣ್ ಹತ್ಯೆ ಸಂಬಂಧ ಪ್ರತಿಕ್ರಿಯಿಸಿದ ಅವರು,  ಕರ್ನಾಟಕದಲ್ಲಿ ನನಗೆ ಅಧಿಕಾರ ಕೊಟ್ಟರೆ ಬುಲ್ಡೋಜರ್ ಆಡಳಿತ ತರುತ್ತೇನೆ. ಎರಡನೇ ಯೋಗಿಯಾಗಿ ಕರ್ನಾಟಕದಲ್ಲಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.

ಬಿಜೆಪಿ ಕಾರ್ಯಕರ್ತನ ಕೊಲೆ ಪ್ರಕರಣವನ್ನು ಎನ್‍ ಐಎ ತನಿಖೆಗೆ ನೀಡಲು ಆಗ್ರಹ ಕೇಳಿಬರುತ್ತಿವೆ. ಪರೇಶ್ ಮೇಸ್ತಾ ಸೇರಿದಂತೆ ಅನೇಕ ಪ್ರಕರಣಗಳನ್ನು ಎನ್‍ ಐಎಗೆ ಕೊಟ್ಟರು. ಇಲ್ಲಿಯವರೆಗೂ ಏನೂ ಆಗಿಲ್ಲ. ಹೀಗಾಗಿ ನಮ್ಮ ಪೊಲೀಸರೇ ಒಳ್ಳೆಯ ತನಿಖೆಯನ್ನು ಮಾಡುತ್ತಾರೆ. ಕೊಲೆಗೆ ನ್ಯಾಯ ಕೊಡಿಸುತ್ತಾರೆ ಎಂದು ತಿಳಿಸಿದರು.

ಪ್ರವೀಣ್  ಶವಯಾತ್ರೆಯಲ್ಲಿ ಲಾಠಿ ಚಾರ್ಜ್ ಮಾಡಿದ್ದು ಅಕ್ಷಮ್ಯ ಅಪರಾಧವಾಗಿದೆ. ಬಿಜೆಪಿ ವಿಫಲತೆ ಮುಚ್ಚಿಕೊಳ್ಳಲು ಲಾಠಿ ಚಾರ್ಜ್ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ಲಾಠಿ ಚಾರ್ಜ್ ಮಾಡಲು ಯಾರು ಅನುಮತಿ ನೀಡಿದರು ಎನ್ನುವುದು ತನಿಖೆಯಾಗಬೇಕು. ಲಾಠಿ ಚಾರ್ಜ್ ಮಾಡಿದವರೆಲ್ಲರೂ ಅಮಾನತು ಆಗಬೇಕು ಎಂದು ಅವರು ಒತ್ತಾಯಿಸಿದರು.

ADS

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ