ಮಿನಿ ಬಸ್ ಗೆ ಡಿಕ್ಕಿ ಹೊಡೆದ ರೈಲು: 11 ಮಂದಿಯ ದಾರುಣ ಸಾವು
ಬಾಂಗ್ಲಾದೇಶ: ರೈಲ್ವೆ ಕ್ರಾಸಿಂಗ್ ಮಾಡುತ್ತಿದ್ದ ವೇಳೆ ಮಿನಿ ಬಸ್ ಗೆ ರೈಲು ಡಿಕ್ಕಿ ಹೊಡೆದು 11 ಮಂದಿ ಸಾವನ್ನಪ್ಪಿದ ಅಘಾತಕಾರಿ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ. ಬಾಂಗ್ಲಾದೇಶದ ಚಟ್ಟೋಗ್ರಾಮ್ ಜಿಲ್ಲೆಯಲ್ಲಿ ನಿನ್ನೆ ಸಂಜೆ ನಡೆದಿದೆ.
ಎಕ್ಸ್ ಪ್ರೆಸ್ ರೈಲು ಬಸ್ ಗೆ ಡಿಕ್ಕಿ ಹೊಡೆದು ಒಂದು ಕಿಲೋಮೀಟರ್ ದೂರದವರೆಗೆ ರೈಲು ಮಿನಿ ಬಸ್ ಅನ್ನು ಎಳೆದೊಯ್ದಿದೆ. ರೈಲ್ವೆ ಕ್ರಾಸಿಂಗ್ ಬಳಿ ಗೇಟ್ ಹಾಕದ ಕಾರಣ ಮಿನಿ ಬಸ್ ಯಥಾಸ್ಥಿತಿಯಲ್ಲಿ ಮುಂದೆ ಸಾಗುತ್ತಿರುವ ವೇಳೆ ವೇಗವಾಗಿ ಬಂದ ರೈಲು ಡಿಕ್ಕಿಯಾಗಿದೆ.
ಘಟನೆಯಲ್ಲಿ ಬಸ್ಸಿನಲ್ಲಿದ್ದ 11 ಮಂದಿ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಅಮನ್ ಬಜಾರ್ ಪ್ರದೇಶದ ಕೋಚಿಂಗ್ ಸೆಂಟರ್ ನ ಕೆಲವು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮಿನಿ ಬಸ್ ನಲ್ಲಿ ಕೊಯಾಚೋರೊ ಎಂಬ ಜಲಪಾತವನ್ನು ವೀಕ್ಷಿಸಲು ತೆರಳಿ, ವಾಪಸಾಗುವಾಗ ಈ ಘಟನೆ ದುರಂತ ನಡೆದು ಹೋಗಿದೆ.
ನಿರ್ಲಕ್ಷ್ಯ ವಹಿಸಿದ ಗೇಟ್‌ಮ್ಯಾನ್ ನನ್ನು ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಅಧಿಕಾರಿಗಳು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka