ಯಾವುದೇ ಸಂಘಟನೆ, ಸಿದ್ದಾಂತದವರಾದರೂ ಬಿಡುವುದಿಲ್ಲ, ಕ್ರಮಕೈಗೊಳ್ಳುತ್ತೇವೆ: ಡಿಜಿಪಿ ಪ್ರವೀಣ್ ಸೂದ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಮಸೂದ್, ಪ್ರವೀಣ್, ಫಾಝಿಲ್ ಕೊಲೆ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಅವರು ಯಾವುದೇ ಸಂಘಟನೆ, ಸಿದ್ದಾಂತದವರಾಗಿದ್ದರೂ ಅವರನ್ನು ಬಿಡುವುದಿಲ್ಲ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.
ಸರಣಿ ಹತ್ಯೆಗಳ ಕುರಿತು ಚರ್ಚಿಸಲು ಮಂಗಳೂರಿಗೆ ಬಂದಿದ್ದ ಅವರು ಮಾತನಾಡಿ, ಸಮಾಜದಲ್ಲಿ ಯಾರಾದರೂ ಅಪರಾಧ ನೋಡಿದವರು, ಗೊತ್ತಿದ್ದವರು, ಮಾಹಿತಿ ಇದ್ದವರು ಇರುತ್ತಾರೆ. ಮಾಹಿತಿ ಇರುವ ನಾಗರಿಕರು ಪೊಲೀಸರಿಗೆ ಮಾಹಿತಿ ಕೊಟ್ಟರೆ ಆರೋಪಿಗಳನ್ನು ಶೀಘ್ರ ಬಂಧಿಸಲು ಸಹಾಯವಾಗುತ್ತದೆ ಎಂದು ಹೇಳಿದರು.
ಮಾಹಿತಿ ಗೊತ್ತಿದ್ದು, ಕೊಡಲಿಲ್ಲವೆಂದರೆ ಅವರು ಭಾಗಿ ಎಂದು ನಿರ್ಧರಿಸಬೇಕಾಗುತ್ತದೆ ಎಂದು ಪ್ರವೀಣ್ ಸೂದ್ ಇದೇ ವೇಳೆ ಎಚ್ಚರಿಕೆಯನ್ನೂ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka