ಕ್ರಷರ್ ನಲ್ಲಿ ರಿವರ್ಸ್ ತೆಗೆಯುತ್ತಿದ್ದ ವೇಳೆ ಟಿಪ್ಪರ್ ಮಗುಚಿ ಚಾಲಕ ಸಾವು
ಉಡುಪಿ: ಕ್ರಷರ್ ನಲ್ಲಿ ಲಾರಿ ಹಿಂದಕ್ಕೆ ತೆಗೆಯುತ್ತಿರುವ ವೇಳೆ ನಿಯಂತ್ರಣ ತಪ್ಪಿ ಟಿಪ್ಪರ್ ವೊಂದು ಮಗುಚಿ ಬಿದ್ದು ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಸೂಡ ಗ್ರಾಮದಲ್ಲಿ ಇಂದು ನಡೆದಿದೆ.
ಮೃತರನ್ನು ಟಿಪ್ಪರ್ ಚಾಲಕ 25ವರ್ಷದ ಮಹಮ್ಮದ್ ಆಸಿಫ್ ಎಂದು ಗುರುತಿಸಲಾಗಿದೆ. ಸೂಡ ಗ್ರಾಮದಲ್ಲಿ ಕಾರ್ಯಚರಿಸುತ್ತಿರುವ ಕ್ರಷರ್ ನಲ್ಲಿ ಲಾರಿ ಹಿಂದಕ್ಕೆ ತೆಗೆಯುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಟಿಪ್ಪರ್ ಮಗುಚಿ ಬಿದ್ದಿದೆ.
ಘಟನೆ ವೇಳೆ ಟಿಪ್ಪರ್ ನಡಿಯಲ್ಲಿ ಸಿಲುಕಿ ಚಾಲಕ ಮೃತಪಟ್ಟಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka