ಭಾರೀ ಸ್ಫೋಟದ ಸದ್ದಿನೊಂದಿಗೆ ಆರಂಭವಾಗುತ್ತದೆ ಮಳೆ: ದಕ್ಷಿಣ ಕನ್ನಡ ಕೊಡಗು ಗಡಿ ಭಾಗದಲ್ಲಿ ಮನೆ ಬಿಟ್ಟ ಜನರು!
ದಕ್ಷಿಣ ಕನ್ನಡ: ಕೊಡಗು ದಕ್ಷಿಣ ಕನ್ನಡ ಗಡಿ ಭಾಗದ ಜನರು ತೀವ್ರ ಸ್ಫೋಟದ ಸದ್ದು ಹಾಗೂ ಹಾಗೂ ಭಾರೀ ಮಳೆ, ಪ್ರವಾಹದ ಭೀತಿಯಿಂದ ಕಂಗಾಲಾಗಿದ್ದು, ಹಲವು ಕುಟುಂಬಗಳು ಮನೆ ಕುಸಿತದ ಭೀತಿಯಿಂದ ಮನೆ ತೊರೆದು ಬೇರೆಡೆಗೆ ಸ್ವಯಂ ಆಗಿ ಸ್ಥಳಾಂತರಗೊಂಡಿದ್ದಾರೆ.
ಪ್ರತಿನಿತ್ಯ ಸ್ಪೋಟದ ಸದ್ದಿನೊಂದಿಗೆ ಮಳೆ ಆರಂಭವಾಗುತ್ತಿದೆ. ಮಳೆ ಆರಂಭವಾಗಿ ಹತ್ತು ನಿಮಿಷದಲ್ಲೇ ಪ್ರವಾಹ ಉಂಟಾಗುತ್ತಿದೆ. ಇಲ್ಲಿನ ಅರೆಕಲ್ಲು ಹೊಳೆಯಲ್ಲಿ ಉಂಟಾಗುವ ಪ್ರವಾಹದಿಂದ ಜನರು ತೀವ್ರವಾಗಿ ಆತಂಕಕ್ಕೀಡಾಗಿದ್ದಾರೆ.
ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿಯ ಗ್ರಾಮ ಸಂಪಾಜೆ ಹಾಗೂ ಕಲ್ಲುಗುಂಡಿ ಗ್ರಾಮದಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ. ಸಂಜೆಯಾಗುತ್ತಿದ್ದಂತೆ ಮಳೆಯ ಜೊತೆ ಪ್ರವಾಹದ ಭೀತಿ ಉಂಟಾಗಿದೆ. ಅರೆಕಲ್ಲು ಅರಣ್ಯ ಪ್ರದೇಶದಲ್ಲಿ ಭೂ ಕುಸಿತವಾಗಿದ್ದು, ಇದರ ಪರಿಣಾಮವಾಗಿ ಗುಡ್ಡದಿಂದ ನೀರಿನ ಜೊತೆ ಭಾರಿ ಗಾತ್ರದ ಮರಗಳು ಹರಿದು ಬರುತ್ತಿವೆ.
ಸೇತುವೆಗಳಲ್ಲಿ ಮರಗಳು ಸಿಲುಕಿದ ಪರಿಣಾಮ ಹೊಳೆಯ ನೀರು ಮನೆಗಳಿಗೆ ನುಗ್ಗಿದೆ. ಮಳೆ ನೀರಿನ ಪ್ರವಾಹದಿಂದಾಗಿ ಹತ್ತಾರು ಮನೆಗಳಿಗೆ ಹಾನಿಯಾಗಿದೆ. ಇಲ್ಲಿನ ಅಂಗಡಿಗಳಿಗೆ ನೆರೆ ನೀರು ನುಗ್ಗಿದ್ದು, ಅಪಾರ ನಷ್ಟ ಸಂಭವಿಸಿದೆ.
ಪ್ರವಾಹ ಹಾಗೂ ಭಾರೀ ಸ್ಫೋಟದ ಸದ್ದಿನಿಂದ ಇಲ್ಲಿನ ಜನರು ಮನೆಗಳನ್ನು ಬಿಟ್ಟು ಬೇರೆ ಕಡೆಗಳಲ್ಲಿ ಆಶ್ರಯ ಪಡೆದಿರುದ್ದಾರೆ. ಸತತ ಮೂರು ದಿನಗಳಿಂದ ರಾತ್ರಿ ವೇಳೆಯಲ್ಲಿ ಮಳೆಯಾಗುತ್ತಿದ್ದು, ಜನರ ಗೋಳು ಕೇಳುವವರು ಯಾರು ಎನ್ನುವಂತಾಗಿದೆ.
ಸಂಪಾಜೆ ಕಲ್ಲುಗುಂಡಿ ಪ್ರದೇಶದಲ್ಲಿ ವ್ಯಾಪಕ ಮಳ ಯಾಗುತ್ತಿದೆ. ನಿನ್ನೆ ರಾತ್ರಿ ಸುರಿದ ಮಳೆಗೆ ಸಂಪಾಜೆ ಘಾಟ್ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲಾಧಿಕಾರಿಗಳ ಆದೇಶದಂತೆ ಸಂಪಾಜೆ ಘಾಟ್ ನಲ್ಲಿ ಘನ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಹೀಗಾಗಿ ಸಂಪಾಜೆ ಗೇಟ್ ನಲ್ಲಿ ನೂರಾರು ಲಾರಿಗಳು ಸಾಲು ಗಟ್ಟಿ ನಿಂತಿವೆ. ರಸ್ತೆ ಬಂದ್ ನ ಮಾಹಿತಿ ಇಲ್ಲದ ಲಾರಿ ಚಾಲಕರು ರಸ್ತೆಯ ಬದಿಯಲ್ಲಿ ಲಾರಿಗಳನ್ನು ನಿಲ್ಲಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka