ಪತಿಯಿಂದಲೇ ಪತ್ನಿಯ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ
ಹೆಬ್ರಿ: ಪತಿಯೇ ತನ್ನ ಪತ್ನಿಗೆ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆಗೈದಿರುವ ಘಟನೆ ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ ಹೊನ್ಕಲ್ ಎಂಬಲ್ಲಿ ಆ.5ರಂದು ಮಧ್ಯರಾತ್ರಿ ನಡೆದಿದೆ.
ಬೆಳ್ವೆ ಗ್ರಾಮದ ಹೊನ್ಕಲ್ ನಿವಾಸಿ 36ವರ್ಷದ ಜ್ಯೋತಿ ಹಲ್ಲೆಗೊಳಗಾದ ಮಹಿಳೆ. ಇವರ ಪತಿ ರವಿಚಂದ್ರ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ್ದು, ಬಳಿಕ ಕತ್ತಿಯಿಂದ ಜ್ಯೋತಿಯವರಿಗೆ ಹಲ್ಲೆ ನಡೆಸಿದ್ದಾರೆ. ಇದರಿಂದ ಜ್ಯೋತಿ ಅವರ ಬಲಕೈಗೆ ಗಾಯವಾಗಿದೆ.
ಬಳಿಕ ಅವರು, ಮನೆಯ ಪಕ್ಕದಲ್ಲಿರುವ ಅಕ್ಕನ ಮನೆಗೆ ರಕ್ಷಣೆಗಾಗಿ ಓಡಿ ಹೋಗಿದ್ದಾರೆ. ಆಗ ಪತಿ ರವಿಚಂದ್ರ ‘ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka