ಜಗಳ ಬಿಡಿಸಲು ಹೋದ ಆರೆಸ್ಸೆಸ್ ಮುಖಂಡನಿಗೆ ಚೂರಿ ಇರಿತ! - Mahanayaka

ಜಗಳ ಬಿಡಿಸಲು ಹೋದ ಆರೆಸ್ಸೆಸ್ ಮುಖಂಡನಿಗೆ ಚೂರಿ ಇರಿತ!

kolara
06/08/2022

ಕೋಲಾರ: ಕ್ಷುಲ್ಲಕ ಕಾರಣಕ್ಕೆ ಆರೆಸ್ಸೆಸ್ ಮುಖಂಡನಿಗೆ ಇಬ್ಬರು ಯುವಕರು ಚಾಕುವಿನಿಂದ ಇರಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಮಾರಿಕಾಂಬ ರಸ್ತೆಯ ವೆಂಕಟೇಶ್ವರ ದೇಗುಲದ ಬಳಿ ನಡೆದಿದೆ.

ವರದಿಗಳ ಪ್ರಕಾರ, ಬೈಕ್ ತಾಗಿದ ವಿಚಾರಕ್ಕೆ ಇಬ್ಬರು ಯುವಕರು ಆರೆಸ್ಸೆಸ್ ಮುಖಂಡ ರವಿ ಅವರ ಅಂಗಡಿ ಮುಂದೆ ಜಗಳವಾಡುತ್ತಿದ್ದರೆನ್ನಲಾಗಿದೆ. ಈ ವೇಳೆ ಜಗಳ ಬಿಡಿಸಲು ರವಿ ಹೋಗಿದ್ದು, ಗಲಾಟೆ ಬಿಡಿಸಿ ಅಂಗಡಿಗೆ ಮರಳುತ್ತಿದ್ದ ವೇಳೆ ರವಿ ಅವರ ಮುಖಕ್ಕೆ ಚಾಕುವಿನಿಂದ ಇರಿಯಲಾಗಿದೆ ಎನ್ನಲಾಗಿದೆ.  ಸದ್ಯ ರವಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಒಬ್ಬ ಆರೋಪಿ ಸೈಯದ್ ವಸೀಂನನ್ನು ಸೆರೆ ಹಿಡಿಯಲಾಗಿದ್ದು, ಮತ್ತೊಬ್ಬನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.


Provided by

ಘಟನೆಯ ವಿಚಾರ ತಿಳಿದು ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ  ಮಾಲೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.  ಕೋಲಾರ ಜಿಲ್ಲಾ ಎಸ್ಪಿ ಡಿ. ದೇವರಾಜ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪರಿಸ್ಥಿತಿಉ ತಹಬಂದಿಗೆ ತರಲು ಹಿಂದೂ ಕಾರ್ಯಕರ್ತರನ್ನಪೊಲೀಸ್ ಠಾಣೆ ಆವರಣದಿಂದ ಹೊರ ಕಳುಹಿಸಲಾಗಿದ್ದು, ಹಿಂದೂ ಸಂಘಟನೆ ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಠಾಣೆ ಹೊರಗೆ ಜಮಾಯಿಸಿರುವ ಕಾರ್ಯಕರ್ತರನ್ನ ಪೊಲೀಸರು ಸಮಾಧಾನ ಪಡಿಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ