ವಿಡಿಯೋ ಲೀಕ್ ಘಟನೆಯನ್ನು ವಿವರಿಸಿ ಕಣ್ಣೀರು ಹಾಕಿದ ಸೋನು ಶ್ರೀನಿವಾಸ ಗೌಡ

ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ವೇದಿಕೆಯಲ್ಲಿ ಸಕ್ಕತ್ ಆಗಿ ಸುದ್ದಿಯಾಗುತ್ತಿದ್ದಾರೆ. ಭಿನ್ನ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಗೆ ಪ್ರವೇಶ ನೀಡಿದ ಮರು ಘಳಿಗೆಯಲ್ಲೇ ತನ್ನ ಮನಸ್ಸಿನಲ್ಲಿದ್ದ ನೋವನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ.
ಬಿಗ್ ಬಾಸ್ ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ಸೋನು ಗೌಡ ಅವರು, ತನ್ನ ಜೀವನದಲ್ಲಿ ಎದುರಾದ ನಂಬಿಕೆ ದ್ರೋಹ, ಅವಮಾನಗಳನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ.
ಮನೆಯಲ್ಲಿ “ನೀನು ಯಾರನ್ನು ಬೇಕಾದರೂ ಲವ್ ಮಾಡು ಅಂತ ಸ್ವಾತಂತ್ರ ಕೊಟ್ಟಿದ್ರು, ಹಾಗಾಗಿ ಒಂದು ಹುಡುಗನನ್ನು ಇಷ್ಟಪಟ್ಟೆ, ಆದರೆ ಒಂದು ದಿನ ಅವನು ವಿಡಿಯೋ ಕಾಲ್ ಮಾಡು ಅಂತ ಹೇಳ್ದ, ಆ ಮೇಲೆ ನನ್ನ ಹತ್ರ ವಿಡಿಯೋ ಇದೆ ನೀನು ಯಾರನ್ನ ಮದುವೆ ಆಗ್ತಿಯಾ ಅಂತ ಬೆದರಿಕೆ ಹಾಕಿದ್ದ ಅಂತ ಕಣ್ಣೀರು ಹಾಕಿದರು. ಈ ವೇಳೆ ಇತರ ಸ್ಪರ್ಧಿಗಳು ಸೋನುವನ್ನು ಸಮಾಧಾನ ಪಡಿಸಿದರು.
ಇಷ್ಟು ಸಿನ ಚೈಲ್ಡ್ ಗಳ ಥರ ಆಡಿದ್ದು ಸಾಕು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ಒಳ್ಳೆಯ ಗುರುತು ಪಡೆಯಬೇಕು ಅನ್ನೋದು ನನ್ನ ಉದ್ದೇಶ ಎಂದು ಅವರು ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka