ಕುಸಿದು ಬಿದ್ದ ಮನೆ, ಕುಸಿಯುವ ಹಂತದಲ್ಲಿ ಮತ್ತೊಂದು ಮನೆ: ತೋಟಕ್ಕೆ ನೀರು ನುಗ್ಗಿ ಸಂಕಷ್ಟ
ಬೆಳ್ತಂಗಡಿ: ತಾಲೂಕಿನಾದ್ಯಂತ ಸೋಮವಾರವೂ ಭಾರೀ ಮಳೆ ಮುಂದುವರಿದಿದ್ದು ನದಿಗಳು ತುಂಬಿಹರಿಯುತ್ತಿದ್ದು ಹಲವೆಡೆ ತೋಟಗಳಿಗೆ ನೀರು ನುಗ್ಗಿದೆ.ತಾಲೂಕಿನಲ್ಲಿ ಎರಡು ಮರಗಳು ಕುಸಿದು ಬಿದ್ದಿದ್ದು ನಷ್ಡ ಸಂಭವಿಸಿದೆ.
ತಾಲೂಕಿನ ನೆರಿಯ ಗಂಡಿಬಾಗಿಲು ನಿವಾಸಿ ಜೋಸೆಫ್ ಎಂಬವರ ಮನೆಯ ಒಂದು ಭಾಗ ಕುಸಿದಿದ್ದು ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಮುಂಡಾಜೆ ಗ್ರಾಮದ ಮುತ್ತೋಟ್ಟು ನಿವಾಸಿ ಸೇಸಪ್ಪ ಪೂಜಾರಿ ಎಂಬವರ ಮನೆಯ ಗೋಡೆ ಕುಸಿದಿದ್ದು ಇಡೀ ಮನೆ ಕುಸಿಯುವ ಭೀತಿಯಿದೆ. ಮನೆಯವರನ್ನು ಸ್ಥಳಾಂತರಿಸಲಾಗಿದೆ. ಮನೆಕುಸಿತಗೊಂಡಿರುವ ಪ್ರದೇಶಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುದ್ದಾರೆ.
ಮುಂಡಾಜೆ, ನೆರಿಯ, ದಿಡುಪೆ, ಕಡಿರುದ್ಯಾವರ ಗ್ರಾಮಗಳ ಹಲವೆಡೆಗಳಲ್ಲಿ ತೋಟಗಳಿಗೆ ನದಿ ನೀರು ನುಗ್ಗಿದೆ. ಇಲ್ಲಿನ ಕಾಯರ್ತೋಡಿ ನಿವಾಸಿ ನರಸಿಂಹ ಪ್ರಭು ಎಂಬವರ ತೋಟಕ್ಕೆ ನೀರು ನುಗ್ಗಿದ್ದು ಇಡೀ ತೋಟ ನೀರಿನಿಂದ ಆವೃತವಾಗಿದೆ.
ನೆರಿಯ ನದಿಯಲ್ಲಿ ಭಾರೀ ನೀರು ಹರಿದಿದ್ದು ಅಣಿಯೂರು- ಕಾಟಾಜೆ- ಪರ್ಪಳ ಸಂಪರ್ಕ ರಸ್ತೆಗೆ ನೀರು ನುಗ್ಗಿ ವಾಹನ ಸಂಚಾರಕ್ಕೆ ಕೆಲ ಗಂಟೆಗಳ ಕಾಲ ಅಡಚಣೆಯುಂಟಾಯಿತು.
ಸಂಜೆಯ ವೇಳೆ ನೀರು ಇಳಿದಿದ್ದು ಜನರು ಮನೆಗಳಿಗೆ ಹಿಂತಿರುಗಿದೆರು.ಮಿತ್ತಬಾಗಿಲಿನ ಕೊಪ್ಪದ ಗಂಡಿ ಸೇತುವೆ ಮುಳುಗಡೆಯಾಗಿ ಜನ ಸಂಚಾರಕ್ಕೆ ಅಡಚಣೆಯುಂಟಾಯಿತು.
ನೇತ್ರಾವತಿ, ಮೃತ್ಯುಂಜಯ, ನೆರಿಯ ಹೊಳೆಗಳು ಅಪರಾಹ್ನದ ವೇಳೆ ತುಂಬಿಹರಿಯಲಾರಂಭಿಸಿದ್ದು ಜನರಲ್ಲಿ ಪ್ರವಾಹದ ಭೀತಿಯುಂಟಾಗಿತ್ತು ಸಂಜೆಯ ವೇಳೆಗೆ ನೀರಿನ ಅಬ್ಬರ ಒಂದಿಷ್ಟು ಕಡಿಮೆಯಾಗಿದ್ದು ಜನರು ನಿಟ್ಟುಸಿರು ಬಿಡುವಂತಾಗಿದೆ. ಮಳೆ ನಿರಂತರವಾಗಿ ಮುಂದುವರಿದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka