ನದಿಗೆ ಕೋಳಿ ತ್ಯಾಜ್ಯ ಎಸೆದು ಪರಾರಿಯಾದ ಪಾಪಿಗಳು!
09/08/2022
ಬೆಳ್ತಂಗಡಿ: ಮುಂಡಾಜರಯ ರಾಷ್ಟ್ರೀಯ ಹೆದ್ದಾರಿ ಸಮೀಪವಿರುವ ಕಾಪು ಕಿಂಡಿ ಅಣೆಕಟ್ಟು ಪ್ರದೇಶದ ಮೃತ್ಯುಂಜಯ ನದಿಗೆ ಕೋಳಿ ತ್ಯಾಜ್ಯ ಎಸೆದಿರುವ ಘಟನೆ ನಡೆದಿದೆ.
ಕಿಂಡಿ ಅಣೆಕಟ್ಟು ಪ್ರದೇಶದಲ್ಲಿ ನಾಲ್ಕಾರು ಗೋಣಿ ಚೀಲಗಳಲ್ಲಿ ಕೋಳಿ ತ್ಯಾಜ್ಯ ಕಂಡು ಬಂದಿದ್ದು ಇನ್ನಷ್ಟು ತ್ಯಾಜ್ಯವನ್ನು ನದಿಗೆ ಎಸೆದಿರುವ ಸಂಶಯ ವ್ಯಕ್ತವಾಗಿದೆ.
ನದಿಯಲ್ಲಿ ನೀರಿನ ಹರಿವು ಹೆಚ್ಚಿರುವ ಕಾರಣ ಈ ಪ್ರದೇಶದಲ್ಲಿ ಜನಸಂಚಾರ ಇರುವುದಿಲ್ಲ.ಈ ಕಾರಣದಿಂದ ತ್ಯಾಜ್ಯ ಎಸೆದಿರುವ ಘಟನೆ ಸೋಮವಾರ ಸ್ಥಳೀಯರ ಗಮನಕ್ಕೆ ಬಂದಿದೆ. ಈ ಬಗ್ಗೆ ಮುಂಡಾಜೆ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka