ಸುರತ್ಕಲ್ ಪೇಟೆಯಲ್ಲಿ ʼಸಾವರ್ಕರ್ ವೃತ್ತʼ ಹೆಸರಿನ ಬ್ಯಾನರ್!

ಮಂಗಳೂರು: ನಗರದ ಸುರತ್ಕಲ್ ಪೇಟೆಯಲ್ಲಿ ʼಸಾವರ್ಕರ್ ವೃತ್ತʼ ಎಂಬ ಹೆಸರಿನ ಅನಧಿಕೃತ ಬ್ಯಾನರ್ ಪ್ರತ್ಯಕ್ಷವಾಗಿದ್ದು ವಿಷ್ಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಅದನ್ನು ತೆರವುಗೊಳಿಸಿದ್ದಾರೆ.
ಸುರತ್ಕಲ್ ನಿಂದ ಕೃಷ್ಣಾಪುರ ಕಡೆ ತಿರುವು ಪಡೆಯುವ ಮೇಲ್ಸೇತುವೆಯ ಅಡಿಯಲ್ಲಿ ಸಾವರ್ಕರ್ ಭಾವಚಿತ್ರ ಹಾಗೂ ಸಾವರ್ಕರ್ ವೃತ್ತ ಎಂಬ ಬ್ಯಾನರನ್ನು ಅಳವಡಿಸಲಾಗಿತ್ತು.
ಬ್ಯಾನರ್ ಅಳವಡಿಸಿರುವ ಸ್ಥಳದಲ್ಲಿ ಪೊಲೀಸರು ಪ್ರತಿದಿನ ರಾತ್ರಿ ಹಗಲು ಗಸ್ತು ನಡೆಸುತ್ತಿದ್ದರು. ಅಲ್ಲದೆ, ಕೆಎಸ್ ಆರ್ ಪಿ ತುಕಡಿಯೊಂದನ್ನು ಇದೇ ಪ್ರದೇಶದಲ್ಲಿ ಇಡಲಾಗಿತ್ತು. ಇಷ್ಟೂ ಬಂದೋಬಸ್ತ್ ಮಾಡಿದ್ರೂ ಹೇಗೆ ದುಷ್ಕರ್ಮಿಗಳು ಈ ಕೃತ್ಯ ಎಸಗಿದರು ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka