‘ಲಂಚ ಮಂಚದ ಸರ್ಕಾರ’: ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಮುರುಗೇಶ್ ನಿರಾಣಿ ಬೇಸರ!
ಕಲಬುರ್ಗಿ: ಯುವಕರು ಕೆಲಸ ಬೇಕಾದ್ರೆ, ಲಂಚ ಕೊಡಬೇಕು, ಯುವತಿಯರು ಕೆಲಸ ಬೇಕಾದ್ರೆ ಮಂಚ ಹತ್ತಬೇಕು ಅನ್ನೋವಂತಹ ಸ್ಥಿತಿ ನಿರ್ಮಾಣವಾಗಿದೆ ಎಂಬ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಸಚಿವ ಮುರುಗೇಶ್ ನಿರಾಣಿ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಲಂಚ ಮಂಚದ ಸರ್ಕಾರ ಎಂದು ಕರೆದಿದ್ದಾರೆ. ಇಂತಹ ಹೇಳಿಕೆ ಯಾರ ಬಾಯಲ್ಲೂ ಬರಬಾರದು. ಸುಸಂಸ್ಕೃತ ಕುಟುಂಬದಿಂದ ಇಂತಹ ಮಾತು ಕೇಳಲು ಬೇಸರವಾಗುತ್ತದೆ ಎಂದು ಅವರು ಹೇಳಿದರು.
ಈ ರೀತಿಯಾಗಿ ಮಾತನಾಡುವ ಬದಲು, ಪ್ರಿಯಾಂಕ್ ಖರ್ಗೆ ತಮ್ಮ ಜವಾಬ್ದಾರಿಯ ಕೆಲಸಗಳ ಕಡೆಗೆ ಗಮನ ಕೊಡಬೇಕು. ಪ್ರಿಯಾಂಕ್ ಖರ್ಗೆ ಜನತೆ ಹಾಗೂ ಮಹಿಳೆಯರ ಕ್ಷಮೆ ಕೇಳಬೇಕು ಎಂದು ಅವರು ಒತ್ತಾಯಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka