ದೇಶ ವಿಭಜನೆಯಾಗಲು ಪಂಡಿತ ಜವಹರ್ ಲಾಲ್ ನೆಹರೂ ಕಾರಣ: ಯತ್ನಾಳ್ ಆರೋಪ
ವಿಜಯಪುರ: ದೇಶ ವಿಭಜನೆಯಾಗಲು ಪಂಡಿತ ಜವಹರ್ ಲಾಲ್ ನೆಹರೂ ಅವರೇ ಕಾರಣ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನ ಬಳಿ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆಯ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸರ್ಕಾರಿ ಜಾಹೀರಾತಿನಲ್ಲಿ ನೆಹರು ಪೊಟೋ ಬಿಟ್ಟ ವಿಚಾರವಾಗಿ ಮಾತನಾಡುತ್ತಿದ್ದರು.
ನೆಹರೀ ಪೊಟೋ ಬಿಟ್ಟಿದ್ದು ತಪ್ಪೇನಲ್ಲ, ನೆಹರು ಕೊಡುಗೆ ದೇಶಕ್ಕೇನಿದೆ? ದೇಶದ ಮೊದಲ ಪ್ರಧಾನಿ ನೆಹರು ಇರಬಹುದು, ಆದರೆ ನಮ್ಮ ಲೆಕ್ಕದಲ್ಲಿ ದೇಶದ ಮೊದಲ ಪ್ರಧಾನಿ ನೇತಾಜಿ ಸುಭಾಷಚಂದ್ರ ಭೋಸ್ ಎಂದು ಹೇಳಿದರು.
ದೇಶದ ಈ ಸ್ಥಿತಿಗೆ ನೆಹರೂ ಅವರೇ ಕಾರಣ ಎಂದ ಅವರು, ಕಾಶ್ಮೀರಕ್ಕೆ 370 ವಿಶೇಷ ಆರ್ಟಿಕಲ್ ಕೊಟ್ಟರು. ಭಾರತ ಪಾಕಿಸ್ತಾನ ದೇಶ ಒಡೆದದ್ದೇ ನೆಹರು ಸಲುವಾಗಿ. ನೆಹರುನ ಪ್ರಧಾನಿ ಮಾಡಲು ದೇಶ ಒಡೆಯಲಾಗಿದೆ. ದೇಶ ಇಬ್ಬಾಗವಾಗಲು ಪಂಡಿತ ಜವಾಹರಲಾಲ್ ನೆಹರು ಪ್ರಮುಖ ಕಾರಣ ಎಂದು ಆರೋಪಿಸಿದರು.
ಸರ್ದಾರ್ ವಲ್ಲಭಾಯಿ ಪಟೇಲ್ ಅಥವಾ ನೇತಾಜಿ ಸುಭಾಷ ಚಂದ್ರಭೋಸ ಪ್ರಧಾನಿಯಾಗಿದ್ದರೆ ದೇಶ ಇಬ್ಬಾಗ ಆಗುತ್ತಿರಲಿಲ್ಲ. ಗಾಂಧಿ ಅವರು ನೆಹರು ಪ್ರಧಾನಿಯಾಗಲಿ ಎಂದು ಹಠ ಹಿಡಿದರು, ದೇಶ ಇಬ್ಬಾಗ ಮಾಡಿ ಕೊಟ್ಟರು ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪಾಕಿಸ್ತಾನ ಇಬ್ಬಾಗಕ್ಕೆ ವಿರೋಧಿಸಿದ್ದರು ಭಾರತ ಒಡೆಯಬೇಡಿ ಎಂದು ಅಂಬೇಡ್ಕರ್ ಹೇಳಿದ್ದರು. ಒಂದು ವೇಳೆ ಅನಿವಾರ್ಯ ಬಂದರೆ ರಾಷ್ಟ್ರಾಂತರ ಮಾಡಿ ಎಂದಿದ್ದರು. ಪಾಕಿಸ್ತಾನದಲ್ಲಿನ ಹಿಂದುಗಳನ್ನು ಭಾರತಕ್ಕೆ ತನ್ನಿ, ಇಲ್ಲಿರುವ ಮುಸ್ಲಿಂ ಅವರನ್ನು ಪಾಕಿಸ್ತಾನ ಕಳುಹಿಸಿ ಎಂದು ಅಂಬೇಡ್ಕರ್ ಹೇಳಿದ್ದರು ಎಂದು ಅವರು ಇದೇ ವೇಳೆ ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka