ಕ್ರಷರ್ ರಹಸ್ಯ ಬಯಲಾಗುವ ಭೀತಿಯಿಂದ ಕೊಡಗಿನಲ್ಲಿ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ!? - Mahanayaka

ಕ್ರಷರ್ ರಹಸ್ಯ ಬಯಲಾಗುವ ಭೀತಿಯಿಂದ ಕೊಡಗಿನಲ್ಲಿ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ!?

vinai kumar sorake
20/08/2022

ಉಡುಪಿ: ಕೊಡಗಿನಲ್ಲಿ ಮಳೆ ಹಾನಿ ನಿರ್ವಹಿಸಲು ರಾಜ್ಯ ಸರ್ಕಾರ ವಿಫಲವಾಗಿದ್ದು, ಹೀಗಾಗಿ ಸಿದ್ದರಾಮಯ್ಯನವರು ಪರಿಶೀಲನೆಗೆ ತೆರಳಿದಾಗ ಮೊಟ್ಟೆ ಎಸೆದು, ಕಪ್ಪು ಬಾವುಟ ತೋರಿಸಿ ಬಿಜೆಪಿ ಕಾರ್ಯಕರ್ತರು ತಡೆಯೊಡ್ಡಿದ್ದಾರೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅಭಿಪ್ರಾಯಪಟ್ಟಿದ್ದಾರೆ.


Provided by

ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ ನೈಸರ್ಗಿಕ ವಿಪತ್ತುಗಳ ಬಗ್ಗೆ ತಿಳಿಯಲು ಹೋಗಿದ್ದರು. ಸಿದ್ದರಾಮಯ್ಯನವರಿಗೆ ಅವಮಾನಕರವಾಗಿ ಕಪ್ಪು ಭಾವುಟ ತೋರಿಸಿ ಮೊಟ್ಟೆ ಎಸೆದಿದ್ದಾರೆ. ಇಂತಹಾ ಘಟನೆ ರಾಜ್ಯದಲ್ಲಿ ಪ್ರಥಮವಾಗಿದ್ದು, ಘಟನೆಯನ್ನು ಖಂಡಿಸುವುದಾಗಿ ತಿಳಿಸಿದರು.

ಇದು ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿನ‌ಹಲ್ಲೆ. ಕೊಡಗು ವಿಪತ್ತಿನಿಂದ ತತ್ತರಗೊಂಡಿದೆ, ಜನರಲ್ಲಿ ಆತಂಕ‌ ಮನೆಮಾಡಿದೆ. ದೂರದೃಷ್ಟಿ ಇಲ್ಲದೆ ಡಿಸಿ ಕಚೇರಿ ಗುಡ್ಡದ ಮೇಲೆ ಕಟ್ಟಿದ್ದಾರೆ. ಐದು ಕೋಟಿಯ ಡಿಸಿ ಕಚೇರಿಗೆ ಏಳು‌ಕೋಟಿ‌ ತಡೆಗೊಡೆಗೆ ಕಟ್ಟಿದ್ದಾರೆ. ಶಾಶ್ವತ ಪರಿಹಾರಕ್ಕೆ ಈ ಸರಕಾರ ಯಾವುದೇ ಕೆಲಸ ಮಾಡಿಲ್ಲ ಎಂದು ಅವರು ಆರೋಪಿಸಿದರು.


Provided by

ಮಳೆ ಹಾನಿ ಬಗ್ಗೆ ಮುಖ್ಯಮಂತ್ರಿಗಳು ಸಮರ್ಪಕ ತಪಾಸಣೆ ಮಾಡಿಲ್ಲ, ತಾತ್ಕಾಲಿಕ ಚೆಕ್ ಕೊಟ್ಟು ಹೋಗಿದ್ದಾರೆ. ಮುಖ್ಯ‌ಮಂತ್ರಿಗಳು ಕ್ರಮಕೈಗೊಂಡಿಲ್ಲ. ವಿಪಕ್ಷ ನಾಯಕರು ಹೋದಾಗ ಅಡ್ಡಿ ಪಡಿಸಿದ್ದಾರೆ ಎಂದು ವಿನಯ್ ಕುಮಾರ್ ಸೊರಕೆ ಟೀಕಿಸಿದರು.

ಶಾಶ್ವತ ಪರಿಹಾರಕ್ಕೆ ಒತ್ತು‌ನೀಡಲು ಆಗ್ರಹಿಸಿ ಸಿದ್ದರಾಮಯ್ಯ ಹೋಗಿದ್ದರು. ಕೊಡಗಿನಲ್ಲಿ ಐವತ್ತು ಕ್ರಷರ್ ಗಳು ನಡೆಯುತ್ತಿವೆ. ಇದರಿಂದ ಭೂಮಿಯಲ್ಲಿ ನಿರಂತರ ಸ್ಪೋಟ ಆಗುತ್ತೆ. ಈ ಕ್ರಶರ್ ಗಳಲ್ಲಿ  ಸ್ಥಳೀಯ ಜನಪ್ರತಿನಿಧಿಗಳ ಸಹಭಾಗಿತ್ವ ಇದೆ. ಹಾಗಾಗಿ ಉದ್ದೇಶಪೂರ್ವಕವಾಗಿಯೇ ಸಿದ್ದರಾಮಯ್ಯನವರನ್ನು ತಡೆದಿದ್ದಾರೆ. ಸಿದ್ದರಾಮಯ್ಯ ಸ್ಫೋಟ ನಡೆಯುವ ಸ್ಥಳ ನೋಡಿದರೆ ಇವರ ಸತ್ಯ ಬಯಲಾಗುತ್ತೆ ಎನ್ನುವ ಭಯಕ್ಕೆ ಈ ಕೃತ್ಯ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು.

ವಾಸ್ತವ ವಿಚಾರ ತಿಳಿಯಲು ಸಿದ್ದರಸಮಯ್ಯ ಹೋಗಿದ್ದರು. ಅವರಿಗೆ ಉದ್ದೇಶಪೂರ್ವಕ‌ ತಡೆಯೊಡ್ಡಿದ್ದಾರೆ. ಮೊಟ್ಟೆ ಎಸೆಯುವ ಕರಿಪತಾಕೆ ಹಿಡಿಯುವ ಶಕ್ತಿ ಎಲ್ಲ ರಾಜಕೀಯ ಪಕ್ಷಗಳಿಗೂ ಇದೆ. ವಿರೋಧ ಪಕ್ಷದ ನಾಯಕರು ಮುಖ್ಯಮಂತ್ರಿಗೆ ಸರಿಸಮ. ಇವರ ಇಂಟಲಿಜೆನ್ಸ್ ಏನು ಮಾಡುತ್ತಿತ್ತು ಗೃಹ ಸಚಿವರು ಏನು ಮಾಡುತ್ತಿದ್ದರು? ಪ್ರತಾಪ ಸಿಂಹ ಭಾವನಾತ್ಮಕ ವಿಚಾರ ಮಾತ್ರ ಮಾತನಾಡುತ್ತಾರೆ. ಶಾಶ್ವತ ಪರಿಹಾರದ ಬಗ್ಗೆ ಒಂದೇ ಒಂದು ಕಾರ್ಯಕ್ರಮ ಇಲ್ಲ. ಎರಡು ಮೂರು ತಿಂಗಳಿಗೊಮ್ಮೆ ಕೊಡಗಿಗೆ ಬಂದು ಹೇಳಿಕೆ ಕೊಟ್ಟು ಹೋಗುತ್ತಾರೆ ಮಂಡ್ಯದಲ್ಲಿ ಸುಮಲತಾ ಕ್ರಷರ್ ನಿಲ್ಲಬೇಕು ಎಂದರೆ, ಪ್ರತಾಪ ಸಿಂಹ ಕ್ರಷರ್ ನಡೆಯಬೇಕು ಎಂದು ಒತ್ತಾಯ ಮಾಡುತ್ತಾರೆ. ಕೊಡಗಿನಲ್ಲಿ ನಡೆಯುತ್ತಿರುವ ವಿಪತ್ತುಗಳಿಗೆ ಅಲ್ಲಿನ ಲೋಕಸಭಾ ಸದಸ್ಯರು ಶಾಸಕರು ಕೂಡ ಕಾರಣ ಎಂದು ವಿನಯ್ ಕುಮಾರ್ ಆರೋಪಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ